ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಸ್ಪೋಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬರುವವರ ಪಾಸ್ ತಡೆಯಲು ಮನವಿ ಮಾಡಿದ್ದೇನೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮಾತನಾಡಿದ್ದೇನೆ. ಸೇವಾ ಸಿಂಧು ಆ್ಯಪ್ ನಲ್ಲಿ ಆನ್ ಲೈನ್ ಪಾಸ್ ನಿಲ್ಲಿಸಲು ಸಲಹೆ ಕೊಟ್ಟಿದ್ದೇನೆ. ಈಗ ಜಿಲ್ಲೆಯಲ್ಲಿರುವ ಸೋಂಕಿತರು ಗುಣಮುಖರಾದ ಮೇಲೆ ಉಳಿದವರಿಕೆ ಪಾಸ್ ಕೊಡಲು ಸಲಹೆ ನೀಡಲಾಗಿದೆ ಎಂದರು.
ಒಂದು ವಾರದಲ್ಲಿ ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಬಹಳ ಕಡಿಮೆ ಜನ ಬಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕಾಗಿದೆ.
ಎಂ.ಎಚ್.ಐ. ಮಾರ್ಗಸೂಚಿ ಪ್ರಕಾರ ಬರುವವರನ್ನು ತಡೆಯಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ಎಲ್ಲವೂ ಕ್ಲೀಯರ್ ಆದ ಬಳಿಕ ಉಡುಪಿಗೆ ಬನ್ನಿ ಎಂದು ನಾನು ಮುಂಬೈ ಜನರಲ್ಲಿ ವಿನಂತಿ ಮಾಡುತ್ತೇನೆ ಎಂದು ತಿಳಿಸಿದರು.