ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು,ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಗುರುವಾರ ಸುಮಾರು 1,20,000 ಕ್ಯೂಸೆಕ್ ನೀರು ಮತ್ತು ರಾಜಾಪುರ ಬ್ಯಾರೆಜ್ ನಿಂದ 29900 ಕ್ಯೂಸೆಕ್ ನೀರು ಬಿಡಲಾಗಿದೆ. ಇದ್ದರಿಂದ ನದಿ ತೀರದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಕರ್ನಾಟಕದ ಕೃಷ್ಣಾ ಮತ್ತು ಉಪನದಿಗಳಿಗೆ 131,920 ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿರುತ್ತಿದೆ.
ಕೃಷ್ಣಾ, ಧೂಧಗಂಗಾ ವೇದ ಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿದ ಏಳು ಸೇತುವೆಗಳು ಈಗಾಗಲೇ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿತೀರದಲ್ಲಿ ತಾಲೂಕಾ ಆಡಳಿತದಿಂದ ಹೈ ಅಲರ್ಟ ಘೋಷಿಸಿದ್ದು, ಇಂಗಳಿ ಮತ್ತು ಮಾಂಜರಿ ಗ್ರಾಮದ ತೋಟದ ವಸತಿಗಳ ಜನರಿಗೆ ಆತಂಕ ಹಿಚ್ಚಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನದಿತೀರದಲ್ಲಿ ಜಿಲ್ಲಾಡಳಿತದಿಂದ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು.ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ 25 ಜನರ ಎನ್ ಡಿ ಆರ್ ಎಪ್ ತಂಡ ಬೀಡು ಬಿಟ್ಟಿದೆ. ನೋಡಲ್ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಎಚ್ಚರಿಕೆಯ ಸೂಚನೆ ರವಾನಿಸಲಾಗಿದೆ.