ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಮುಂದುವರೆದಿದ್ದು,ಮಹಾರಾಷ್ಟ್ರ ಕೋಯ್ನಾದಿಂದ ಗುರುವಾರ ಕೃಷ್ಣಾ ನದಿಗೆ ಸುಮಾರು 1,02,000 ಕ್ಯೂಸೆಕ್ ನೀರು ಮತ್ತು ವೇದಗಂಗಾ ಮತ್ತು ದುದಗಂಗಾ ನದಿಗೆ 29,900 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ ಹೆಚ್ಚದ ಹಿನ್ನೇಲೆ ನದಿಪಾತ್ರದ ಸ್ಥಳಗಳಿಗೆ ಜಿಲ್ಲಾಧಿಕಾರಿ ಎo.ಜಿ ಹಿರೇಮಠ ಹಾಗೂ ಚಿಕ್ಕೋಡಿ ಸಂಸ ದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.
ಚಿಕ್ಕೊಡಿ ಪಟ್ಟಣದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ಕಳೆದ ಬಾರಿಯ ಪ್ರವಾಹದ ಅನುಭವ ನಮ್ಮ ಜಿಲ್ಲೇಗಿದ್ದು ಈ ಬಾರಿ ಎಲ್ಲ ಅಗತ್ಯ ಕ್ರಮ ಹಾಗೂ ಜನರಿಗೆ ಯಾವದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವದು . ಇನ್ನು ನಿರಂತರವಾಗಿ ಮಹಾರಾಷ್ಟ್ರದ ನೀರು ಹರಿಯುವಿಕೆಯಲ್ಲಿ ಹೆಚ್ಚಳವಾಗುತ್ತಿದ್ದು ಮಹಾರಾಷ್ಟ್ರದ ಸಾತಾರಾ ಜಿಲ್ಲಾಧಿಕಾರಿಗಳನ್ನು ಸಂಪರ್ಕದಲ್ಲಿದ್ದು ಮಳೆಯ ಮಾಹಿತಿ ಪಡೆಯಲಾಗುತ್ತಿದೆ.
ಬೆಳಗಾವಿ ಜಿಲ್ಲಾಡಳಿತದಿಂದ ಪ್ರವಾಹದ ಮುಂಜಾಗೃತ ಕ್ರಮವಾಗಿ ೭ ಹಳ್ಳಿಗಳಲ್ಲಿ ಡಂಗೂರ ಸಾರಿದ್ದು ಹಾಗೂ ನಿಪ್ಪಾಣಿಯ ಮೂರು ಹಳ್ಳಿಗೆ ಬೇಟಿ ನೀಡಿ ಸ್ಥಳಾಂತರಕ್ಕೆ ಸೂಚಿಸಿ, ಸಾಮಾಜಿಕ ಅಂತರ ಹಾಗೂ ಮಾಸ್ಕ ಸ್ಯಾನಿಟೈಜ್ ಬಳಕೇಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೂ ಹಳ್ಳಿಗಳಿಗೆ ಕಾರವಾರ ಖಾಸಗಿ ಕಂಪನಿಗೆ ಬೋಟ್ ಬಗ್ಗೆ ಚರ್ಚಿಸಲಾಗಿದ್ದು, ಬೆಳಗಾವಿ ಮಿಲಿಟರಿ ತಯಾರಿ ಬಗ್ಗೆ ಚರ್ಚಿಸಲಾಗಿದೆ.ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ 25 ಜನರ ಎನ್ ಡಿ ಆರ್ ಎಪ್ ತಂಡ ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಕ್ಷಣಕ್ಷಣದ ಮಾಹೀತಿ ನೀಡುವಂತೆ ತಿಳಿಸಲಾಗಿದೆ.
ಭೀವಶಿ, ಸಿದ್ನಾಳ, ಕುನ್ನೂರು ಗ್ರಾಮದಲ್ಲಿ ಒಟ್ಟು ಮೂರುಕಡೆಗಳಲ್ಲಿ ಗಂಜೀ ಕೇಂದ್ರ ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
ಕರ್ನಾಟಕದ ಕಲ್ಲೋಳದ ಕೃಷ್ಣಾ ಮತ್ತು ಉಪನದಿಗಳಿಗೆ ಒಟ್ಟು1,31,920 ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿರುತ್ತಿದೆ.
ಕೃಷ್ಣಾ, ಧೂಧಗಂಗಾ ವೇದ ಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿದ ಏಳು ಸೇತುವೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿತೀರದಲ್ಲಿ ತಾಲೂಕಾ ಆಡಳಿತದಿಂದ ಹೈ ಅಲರ್ಟ ಘೋಷಿಸಿದ್ದು, ಇಂಗಳಿ ಮತ್ತು ಮಾಂಜರಿ ಗ್ರಾಮದ ತೋಟದ ವಸತಿಗಳ ಜನರಿಗೆ ಆತಂಕ ಹಿಚ್ಚಿದೆ ಎಂದರು.
ಕೋಯ್ನಾ-202 ಮಿಲಿಮೀಟರ್, ವಾರಣಾ-165 ಮಿಲಿಮೀಟರ್, ನವಜಾ-245 ಮಿಲಿಮೀಟರ್, ಮಹಬಳೇಶ್ವರ-183 ಮಿಲಿಮೀಟರ್, ಕೊಲ್ಹಾಪುರ-128 ಮಿಲಿಮೀಟರ್, ಪಾಟಗಾಂವ್-140 ,ಮಿಲಿಮೀಟರ್,ರಾಧಾನಗರಿ-271 ಮಿಲಿಮೀಟರ್, ಕಾಳಮ್ಮವಾಡಿ-255 ಮಿಲಿಮೀಟರ್ ಮಳೆ ದಾಖಲಾಗಿದೆ.
ಚಿಕ್ಕೋಡಿ ಸೇರಿ ನಿಪ್ಪಾಣಿ,ಕಾಗವಾಡ, ರಾಯಭಾಗ,ಅಥಣಿ ತಾಲೂಕಿನ ನದಿತೀರದಲ್ಲಿ ಹೈ ಅಲರ್ಟ ಘೋಷಿಸಲಾಗಿದೆ.ಹಿಪ್ಪರಗಿ ಬ್ಯಾರೇಜ್ ನಿಂದ ಹೊರಹರಿವು-1 ಲಕ್ಷ 2 ಸಾವಿರ ಕ್ಯೂಸೆಕ್ ಮಹಾರಾಷ್ಟ ದಿಂದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದ್ದು, ಚಿಕ್ಕೋಡಿ ಹಾಗು ನಿಪ್ಪಾಣಿ ತಾಲೂಕಿನಲ್ಲಿನ ೭ ಬಾಂದಾರುಗಳು ಮುಳುಗಡೆ ಹಂತದಲ್ಲಿದೆ. ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬೋಜ-ಹುನ್ನರಗಿ, ಕಾರದಗಾ -ಬೋಜ, ಸಿದ್ನಾಳ-ಅಕ್ಕೋಳ, ಬೋಜವಾಡಿ-ಕುನ್ನುರ, ಜತ್ರಾಟ-ಭೀವಶಿ ಬಾಂದಾರಗಳು ಸಂಪೂರ್ಣ ಜಲಾವೃತ್ತಗೊಂಡಿದ್ದು ನಂತರ ಚಿಕ್ಕೋಡಿ ತಾಲೂಕಿನ ದೂದಗಂಗಾ ನದಿಗೆ ಸೇರುವ ಈ ನದಿ ಚಿಕ್ಕೋಡಿ ತಾಲುಕ ವ್ಯಾಪ್ತಿಯಲ್ಲಿ ಬರುವ ಮಲಿಕವಾಡ-ದತ್ತವಾಡ, ಹಾಗು ಕಲ್ಲೋಳ- ಯಡೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಬಾಂದಾರುಗಳು ಸಂಪೂರ್ಣ ನೀರಿನಿಂದ ಜಲಾವೃತ್ತ ಗೊಂಡಿವೆ.