Monday, August 8, 2022

Latest Posts

ಮಹಾರಾಷ್ಟ್ರ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ: ಮಂಜೇಶ್ವರದ ವಿದ್ಯಾರ್ಥಿನಿಗೆ ದ್ವಿತೀಯ ರಾಂಕ್

ಕಾಸರಗೋಡು: ಮಹಾರಾಷ್ಟ್ರ ರಾಜ್ಯ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶವು ಬುಧವಾರ ಅಪರಾಹ್ನ ಪ್ರಕಟಗೊಂಡಿದ್ದು , ನವಿ ಮುಂಬಯಿಯ ಪನ್ವೆಲ್ ದಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಧನ್ಯಶ್ರೀ ಆಚಾರ್ಯ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾಗಿ 472 ಅಂಕ ಪಡೆಯುವ ಮೂಲಕ ದ್ವಿತೀಯ ರಾಂಕ್ ಗಳಿಸಿದ್ದಾರೆ.
ಮೂಲತಃ ಮಂಜೇಶ್ವರ ಕಡಂಬಾರು ನಿವಾಸಿಯಾದ ಈ ವಿದ್ಯಾರ್ಥಿನಿ ಇದೀಗ ಮುಂಬಯಿಯ ಪನ್ವೆಲ್ ನ ಬಿಂಗಾರಿಯಲ್ಲಿ ವಾಸಿಸುತ್ತಿದ್ದಾರೆ. ಬಿ.ಎಂ.ಸತೀಶ್ ಆಚಾರ್ಯ ಮತ್ತು ಶಾರದಾ ದಂಪತಿಯ ಪುತ್ರಿಯಾಗಿರುವ ಧನ್ಯಶ್ರೀ ಆಚಾರ್ಯ ಮುಂದೆ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss