ಮಹಾರಾಷ್ಟ್ರ ನಂಟು ಬಳ್ಳಾರಿಯಲ್ಲಿ ಕೊರೊನಾ ಮಹಾ ಸ್ಪೋಟ: 11 ಜನರಿಗೆ ಸೊಂಕು ದೃಢ!

0
321

ಬಳ್ಳಾರಿ: ಕೂಲಿ ಅರೆಸಿ ಮಹಾರಾಷ್ಟ್ರಕ್ಕೆ ತೆರಳಿ ವಾಪಸ್ಸಾಗಿದ್ದ ಜಿಲ್ಲೆಯ 11 ಜನರಿಗೆ ಮಹಾಮಾರಿ ಕೊರೋನಾ ಸೊಂಕು ದೃಢಪಟ್ಟಿದ್ದು,  ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಕೂಲಿಕಾರರು ಇತ್ತೀಚೆಗೆ ಬಳ್ಳಾರಿಗೆ ಆಗಮಿಸಿದ್ದರು. ಅವರೆಲ್ಲರನ್ನೂ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟ್ಯನ್ ಮಾಡಲಾಗಿದೆ. ಎಲ್ಲರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ 11 ಜನರಿಗೆ ಸೊಂಕು ಇರುವುದು ದೃಢಪಟ್ಟಿದೆ.

ಸ್ಪೊಟಗೊಂಡ ಸುದ್ದಿ ಕೇಳಿ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಅವರೆಲ್ಲರನ್ನು ಜಿಲ್ಲಾ ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿವರೆಗೆ ಜಿಲ್ಲೆಯಲ್ಲಿ 19 ಜನ ಸೊಂಕಿತರಲ್ಲಿ 13 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಒಬ್ಬ ವ್ಯಕ್ತಿ ಮ್ರತಪಟ್ಟಿದ್ದರು.

ಉಳಿದ 5 ಜನ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ದಿಢಿರನೇ 11 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ನಿದ್ರೆಗೆಡಿಸಿದೆ. 11 ಜನರಲ್ಲಿ 14 ವರ್ಷದ ಬಾಲಕ, 41 ವರ್ಷದ ಪುರುಷ, 31 ವರ್ಷದ ಮಂಗಳಮುಖಿ,  24 ವರ್ಷದ ಯುವಕ, 20 ವರ್ಷದ ಯುವಕ, 31 ವರ್ಷದ ಪುರುಷ, 31 ವರ್ಷದ ಮಹಿಳೆ, 19 ವರ್ಷದ ಯುವತಿ ಸೇರಿ 11 ಜನರಿಗೆ ಸೊಂಕು ಹೊಕ್ಕಿದೆ.

LEAVE A REPLY

Please enter your comment!
Please enter your name here