Wednesday, August 17, 2022

Latest Posts

ಮಹಾರಾಷ್ಟ್ರ ವಿಧಾನ ಸಭೆಯಿಂದ ಅರ್ನಬ್ ಗೆ ಹಕ್ಕುಚ್ಯುತಿ ನೋಟಿಸ್‌: ಸುಪ್ರೀಂ ಕೋರ್ಟ್ ಅಸಮಾಧಾನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪತ್ರಕರ್ತ ಅರ್ನಬ್ ಗೋಸ್ವಾಮಿ ವಿಚಾರವಾಗಿ ಸುಪ್ರೀಂ ಕೋರ್ಟ್​​ ಮಹಾರಾಷ್ಟ್ರದ ವಿಧಾನ ಸಭೆಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಸುದ್ದಿ ಪ್ರಸಾರದ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅರ್ನಾಬ್ ಗೋಸ್ವಾಮಿ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನ ನೀಡಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಅಕ್ಟೋಬರ್​ 13 ರಂದು ಹಕ್ಕುಚ್ಯುತಿ ಮೋಷನ್ ಪಾಸ್ ಮಾಡಿ ಅವರಿಗೆ ನೀಡಿರುವ ಹಕ್ಕುಚ್ಯುತಿ ನೋಟಿಸ್‌ಗೆ ಸುಪ್ರೀಂಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.
ಈ ನೋಟಿಸ್‌ ಪ್ರಶ್ನಿಸಿ ಅರ್ನಬ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌,ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿ ನೀಡಿದ್ದ ಪ್ರಿವಿಲೇಜ್ ನೋಟಿಸ್ ಪ್ರಶ್ನಿಸಿದ್ದು, ನೋಟಿಸ್‌ ಜಾರಿಗೆ ಆದೇಶಿಸಿದೆ.
‘ಈ ಹಕ್ಕುಚ್ಯುತಿ ನೋಟಿಸ್‌ ಕೊಟ್ಟವರ ಬಗ್ಗೆ ನಮಗೆ ಗಂಭೀರ ಪ್ರಶ್ನೆ ಇದೆ, ಈ ಪ್ರಶ್ನೆಯನ್ನು ಕಡೆಗಣಿಸುವುದು ನಮಗೆ ಅಸಾಧ್ಯವಾಗಿದೆ. ಆದ್ದರಿಂದ ಈ ಬಗ್ಗೆ ನಮಗೆ ಸ್ಪಷ್ಟ ಕಾರಣ ಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ.
ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯುವ ಇಂತಹ ಪ್ರಯತ್ನಗಳು ನಡೆಯುತ್ತಿರುವುದು ನ್ಯಾಯಯುತ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಹಸ್ತಕ್ಷೇಪಕ್ಕೆ ಕಾರಣವಾಗುತ್ತವೆ ಎಂದ ನ್ಯಾಯಮೂರ್ತಿಗಳು, ಈ ನೋಟಿಸ್‌ ಉದ್ದೇಶ ಅರ್ಜಿದಾರರನ್ನು ಬೆದರಿಸುವಂತಿದೆ. ಅವರಿಗೆ ಕೋರ್ಟಿಗೆ ಹೋದರೆ ದಂಡ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಇದು ನಮ್ಮ ಸಂವಿಧಾನದ ಪ್ರಕಾರ ತಪ್ಪು. ವ್ಯಕ್ತಿಯ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!