Thursday, July 7, 2022

Latest Posts

ಮಹಾ ಮುಸ್ಲಿಮರಿಗಿಲ್ಲ ಮೀಸಲು: ಉದ್ಧವ್

ಮುಂಬೈ: ರಾಜ್ಯದಲ್ಲಿರುವ ಮುಸ್ಲಿಮರಿಗೆ ಉದ್ಯೋಗದಲ್ಲಿ ಶೇ.5 ಮೀಸಲು ನೀಡಲಾಗುವುದು ಎಂದು ಮಹಾ ಅಘಾಡಿ ಸರ್ಕಾರದ ಸಚಿವ ನವಾಬ್ ಮಲಿಕ್ ಘೋಷಣೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿರಸ್ಕರಿಸಿದ್ದು, ಮುಸ್ಲಿಮರಿಗೆ ಮೀಸಲು ನೀಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಮರಿಗೆ ನೀಡುವ ಮೀಸಲು ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ. ಹಾಗೊಂದು ವೇಳೆ ಪ್ರಸ್ತಾಪ ಬಂದಾಗ ಮೀಸಲು ಕುರಿತು ಪರಿಶೀಲಿಸೋಣ. ಸದ್ಯಕ್ಕೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5 ಮೀಸಲು ನೀಡಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಘೋಷಿಸಿದ್ದರು. ಇದು ಈ ವಿಚಾರವಾಗಿ ಚರ್ಚೆಗೆ ಕಾರಣವಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss