Monday, August 8, 2022

Latest Posts

‘ಮಹಾ’ ಸರಕಾರದಿಂದ ಪ್ರಮುಖ ನಗರಗಳ ಮರುನಾಮಕರಣ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದಲ್ಲಿನ ಮರುನಾಮಕರಣದ ಪರ್ವ ಶುರುವಾಗಿದೆ. ಅಲ್ಲಿನ ಸರಕಾರ ಕೆಲವು ರಸ್ತೆಗಳ, ಕಾಲೋನಿಗಳ ಹಾಗೂ ನಗರಗಳ ಹೆಸರನ್ನು ಬಲಾಯಿಸಿದ್ದು, ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಂಬೈ ರೈಲು ನಿಲ್ದಾಣ ಈಗ ನಾನಾ ಶಂಕರ್‌ಶೇಠ್​ ಸ್ಟೇಷನ್:
ಮುಂಬೈಯ ಪಶ್ಚಿಮ ರೈಲ್ವೆಯ ಮುಖ್ಯ ನಿಲ್ದಾಣವಾದ ಮುಂಬೈ ಸೆಂಟ್ರಲ್​ ಅನ್ನು ಈಗ ಮರುನಾಮಕರಣ ಮಾಡಲಾಗುತ್ತಿದೆ. ಈ ನಿಲ್ದಾಣ ನಾನಾ ಶಂಕರ್‌ಶೇಠ್​ ನಿಲ್ದಾಣವಾಗಿ ಬಲಾಗುತ್ತಿದೆ. ಈ ಸಂಬಂಧ ದಕ್ಷಿಣ ಮುಂಬೈ ಸಂಸದ ಅರವಿಂದ ಸಾವಂತ್ ಕೇಂದ್ರಕ್ಕೆ ಪತ್ರ ಬರೆದು ಹೆಸರು ಬದಲಾವಣೆಗೆ ಸೂಚಿಸಿದ್ದರು. ಈಗ ರೈಲ್ವೆ ಸಚಿವಾಲಯದಿಂದ ಗ್ರೀನ್​ ಸಿಗ್ನಲ್​ ಪಡೆದಿದ್ದಾರೆ. ಶೀಘ್ರದಲ್ಲೇ ನಾನಾ ಶಂಕರ್‌ಶೇಠ್​ ಅವರ ಹೆಸರಿನ ಬೋರ್ಡ್​ ಇಲ್ಲಿ ಕಾಣಸಿಗಲಿದೆ.
ಔರಂಗಾಬಾದ್​ ಈಗ ಸಂಭಾಜಿನಗರ :
ಔರಂಗಾಬಾದ್ ಹೆಸರನ್ನು ಮರುನಾಮಕರಣ ಮಾಡುವ ವಿಷಯವು ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಈ ಹಿಂದೆ ದಿವಂಗತ ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಕರೆದಿದ್ದರು. ಈಗ ಹೆಸರು ಬದಲಾಯಿಸುವಲ್ಲಿ ಶಿವಸೇನೆ ವಿಷಯವನ್ನು ಕೈಗೆತ್ತಿಕೊಂಡಿದೆ.
ಪುಣೆಗೆ ಜಿಜಾಪುರದ ನಾಮಕರಣ:
ಪುಣೆಯ ಹೆಸರನ್ನೂ ಬದಲಾವಣೆ ಮಾಡಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ಬದಲಾವಣೆಗೆ ಬಹುಜನ ಒಕ್ಕೂಟದ ಮುಖಂಡ ಪ್ರಕಾಶ್ ಅಂಬೇಡ್ಕರ್ ನಕಾರ ಎತ್ತಿದ್ದಾರೆ. ಅವರ ಪ್ರಕಾರ, ಪುಣೆಗೆ ಜಿಜಾಪುರದ ಬದಲಿಗೆ ಸಂಭಾಜಿನಗರ ಎಂದು ಮರು ನಾಮಕರಣ ಮಾಡಬೇಕು ಎಂದಿದ್ದಾರೆ.ಈ ಸಂಬಂಧ ಕಾಂಗ್ರೆಸ್​ ಹಾಗೂ ಎನ್​ಸಿಪಿ ವಿರೋಧ ಮಾಡುತ್ತಿವೆ. ನಗರಗಳ ಮರುಹೆಸರಿಸುವ ಪ್ರಸ್ತಾಪ ನಮ್ಮ ಕಾರ್ಯಸೂಚಿಯಲ್ಲಿಲ್ಲ. ನಾವು 20 ವರ್ಷಗಳ ಹಿಂದೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ. ಅಭಿವೃದ್ಧಿ ಹೊಂದಿದ ನಗರಗಳ ಮರುನಾಮಕರಣವನ್ನು ನಾವು ನಂಬುವುದಿಲ್ಲ ಎಂದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss