Thursday, August 11, 2022

Latest Posts

ಮಹಿಳಾ ಕುಸ್ತಿಪಟು ವಿನೇಶ್​ ಪೋಗಟ್​​ಗೆ ಕೊರೋನಾ ಸೋಂಕು ದೃಢ

ನವದೆಹಲಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್​ ಪೋಗಟ್​​ಗೆ ಕೊರೋನಾ ಸೋಂಕು ದೃಢಪಟ್ಟಿದೆ .
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ .
ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಕುಸ್ತಿಪಟು ಏಷ್ಯನ್​ ಹಾಗೂ ಕಾಮನ್​ವೇಲ್ತ್​​ ಗೇಮ್ಸ್​​ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ.
ಸದ್ಯ ಸೋನಿಪತ್​​ನಲ್ಲಿರುವ ಮನೆಯಲ್ಲಿ ಹೋಂ ಕ್ವಾರಂಟೈನ್​ ಆಗಿದ್ದಾರೆ.ಶನಿವಾರ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿರುವ ಕಾರಣ, ಅವರನ್ನು ಕೊಕೊರೋನಾ ಟೆಸ್ಟ್​ಗೊಳಪಡಿಸಲಾಗಿದೆ. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಐಸೊಲೇಷನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss