Wednesday, October 21, 2020
Wednesday, October 21, 2020

Latest Posts

ಇನ್ಮುಂದೆ ರಾಜ್ಯದ ಈ 15 ಜಿಲ್ಲೆಗಳಲ್ಲಿ ‘ಕೊಳವೆ ಬಾವಿ’ ಕೊರೆದರೆ ಕ್ರಿಮಿನಲ್ ಕೇಸ್

ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸದ್ಯಕ್ಕೆ ಹೊಸ ಕೊಳವೆ ಬಾವಿ ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ನಿಯಮ...

ಕೋಲಾರ| ಹೆಚ್ಚಿನ ಕಾಳಜಿ ವಹಿಸಿ ಸಾವಿನ ಪ್ರಮಾಣ ತಗ್ಗಿಸಿ: ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್

ಕೋಲಾರ:  ಸಕ್ಕರೆ ಕಾಯಿಲೆ, ಹೆಚ್.ಐ.ವಿ, ಟಿ.ಬಿ ಪೇಷೆಂಟ್ಸ್, 60 ವರ್ಷ ದಾಟಿದವರು, ಹೃದಯ ಸಂಬಂಧಿ ಖಾಯಿಲೆಗಳು ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಕಾಳಜಿ ವಹಿಸುವ ಮೂಲಕ ಸಾವಿನ ಪ್ರಮಾಣ ತಗ್ಗಿಸಬೇಕು ಎಂದು...

ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ 128 ಜನರಲ್ಲಿ ಕೊರೋನಾ ಸೋಂಕು ದೃಢ, 119 ಮಂದಿ ಗುಣಮುಖ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 128 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾದ 119 ಜನರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 337 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 867 ಸಕ್ರಿಯ ಪ್ರಕರಣಗಳಿದ್ದು,...

ಮಹಿಳಾ ಸುರಕ್ಷತೆಗೆ ದಿಟ್ಟ ಹೆಜ್ಜೆ ಇಟ್ಟ ಸಿಎಂ ಯೋಗಿ ಆದಿತ್ಯನಾಥ್​ : ಉತ್ತರ ಪ್ರದೇಶದಲ್ಲಿ ‘ಮಿಷನ್ ಶಕ್ತಿ’ಗೆ ಚಾಲನೆ

ಲಕ್ನೋ: ಹತ್ರಾಸ್​ ಪ್ರಕರಣದ ಬಳಿಕ ಉತ್ತರ ಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.
ಹೌದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ‘ಮಿಷನ್ ಶಕ್ತಿ’ ಅಭಿಯಾನ ಆರಂಭಿಸಿದ್ದು, ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳ ವಿರುದ್ಧ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ 1,535 ಪೊಲೀಸ್​ ಠಾಣೆಗಳಲ್ಲಿ ಮಹಿಳಾ ದೂರುಗಳಿಗೆಂದೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮಹಿಳಾ ಸುರಕ್ಷತೆಗಾಗಿ ‘ಮಿಷನ್​ ಶಕ್ತಿ’ ಅಭಿಯಾನಕ್ಕಾಗಿ ಅವರು ಚಾಲನೆ ನೀಡಿ ಮಾತನಾಡಿದರು.
ದುರ್ಗಾ ದೇವಿಗೆ ಸಮರ್ಪಿತವಾದ ನವರಾತ್ರಿ ಉತ್ಸವದ ಪ್ರಾರಂಭದೊಂದಿಗೆ ಆರಂಭವಾದ ಈ ಅಭಿಯಾನವು ಬಲರಾಂಪುರದಲ್ಲಿ ಇಬ್ಬರು ಪುರುಷರು ಅತ್ಯಾಚಾರಕ್ಕೆ ಬಲಿಯಾದ ಮಹಿಳೆಯ ಗೌರವದ ಪ್ರತೀಕ ಎಂದು ಹೇಳಿದರು.
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅಪರಾಧಗಳ ಬಗ್ಗೆ ತಮ್ಮ ಸರ್ಕಾರವು ಶೂನ್ಯ ಸಹಿಷ್ಣುತೆಯನ್ನ ಹೊಂದಿದೆ ಎಂದು ಹೇಳಿದರು.
‘ಮಹಿಳೆಯರ ಘನತೆ, ಸ್ವಾಭಿಮಾನದ ಮೇಲೆ ಕೆಟ್ಟ ದೃಷ್ಟಿ ಯನ್ನ ಹಾಕುವವರಿಗೆ ರಾಜ್ಯದಲ್ಲಿ ಸ್ಥಾನವೇ ಸಿಗುವುದಿಲ್ಲ. ಇಂತಹ ಅಪರಾಧಕೃತ್ಯಗಳು ಸಮಾಜಕ್ಕೆ ದೊಡ್ಡ ಅಘಾತವಾಗಿದ್ದು, ಸರ್ಕಾರ ಅವರ ವಿರುದ್ಧ ಕಬ್ಬಿಣದ ಹಸ್ತದಿಂದ ಕ್ರಮ ಕೈಲಿದೆ’ ಎಂದು ಆದಿತ್ಯನಾಥ್ ಪ್ರತಿಪಾದಿಸಿದರು.
‘ಮೊದಲ ಹಂತದಲ್ಲಿ ‘ಮಿಷನ್ ಶಕ್ತಿ’ ಎಂಬ ಅಭಿಯಾನವು ಮಹಿಳೆ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಮನ ಹರಿಸಲಿದೆ. ‘ಎರಡನೇ ಹಂತದಲ್ಲಿ ‘ಆಪರೇಷನ್ ಶಕ್ತಿ’ ಈವ್ ಟೀಸರ್ ಗಳನ್ನು ಟಾರ್ಗೆಟ್ ಮಾಡಿ, ಅವರನ್ನು ಶಿಕ್ಷೆ ಅಥವಾ ಸುಧಾರಣೆಯ ಹಾದಿಗೆ ತಂದು ಕೂರಿಸಲಿದೆ. ಇಂತಹ ಶಕ್ತಿಗಳು ತಮ್ಮ ದಾರಿಯನ್ನ ಸರಿಮಾಡಿ ತೋರಿಸದಿದ್ದರೆ, ಅವರು ಸಾಮಾಜಿಕ ಬಹಿಷ್ಕಾರವನ್ನ ಎದುರಿಸಬೇಕಾಗುತ್ತದೆ. ಮತ್ತವರ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು’ ಎಂದು ಆದಿತ್ಯನಾಥ್ ಹೇಳಿದ್ದಾರೆ.
ಈ ಅಭಿಯಾನದ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ 100 ರೋಲ್ ಮಾಡೆಲ್ ಗಳನ್ನು ಗುರುತಿಸಿ ಮಹಿಳೆಯರ ಸುರಕ್ಷತೆ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂದೇಶ ಪ್ರಸಾರ ಮಾಡಲು ಸಹಾಯವಾಗಲಿದ್ದು, ಮಹಿಳೆಯರು ಶಕ್ತಿ ಸಂಕೇತ ಎಂದು ಬಣ್ಣಿಸಿರುವ ಆದಿತ್ಯನಾಥ್, ಲಿಂಗ ಸಮಾನತೆ ಮತ್ತು ಹೆಣ್ಣು ಮಗುವಿನ ರಕ್ಷಣೆ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಹೆಣ್ಣು ಭ್ರೂಣ ಹತ್ಯೆ ಒಂದು ಶಾಪ ಎಂದು ಬಣ್ಣಿಸುತ್ತ, ಹೆಣ್ಣು ಮಗುವಿನ ರಕ್ಷಣೆ ಮತ್ತು ಮಹಿಳೆಯರಿಗೆ ಗೌರವ ನೀಡುವ ಕೆಲಸ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರು. ಬಾಲ್ಯ ವಿವಾಹವನ್ನು ವಿರೋಧಿಸುವ ತಮ್ಮ ನಿಲುವನ್ನ ಸಿಎಂ ಆದಿತ್ಯನಾಥ್ ವ್ಯಕ್ತಪಡಿಸಿದ್ದು, ಇಂತಹ ಆಚರಣೆಗಳನ್ನ ಸಾರ್ವಜನಿಕವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.
ಮಿಷನ್​ ಶಕ್ತಿ ಆರು ತಿಂಗಳ ಮಹಿಳಾ ಸಬಲೀಕರಣ ಕಾರ್ಯಕ್ರಮವಾಗಿದ್ದು, ಇದಕ್ಕೆ ರಾಜ್ಯಪಾಲೆ ಆನಂದಿಬೆನ್​ ಪಟೇಲ್​ ಲಕ್ನೋದಲ್ಲಿ ಚಾಲನೆ ನೀಡಿದ್ದರೆ, ಉತ್ತರಪ್ರದೇಶದ ಬಲರಾಂಪುರದಲ್ಲಿ ಯೋಗಿ ಆದಿತ್ಯನಾಥ್​ ಚಾಲನೆ ನೀಡಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಇನ್ಮುಂದೆ ರಾಜ್ಯದ ಈ 15 ಜಿಲ್ಲೆಗಳಲ್ಲಿ ‘ಕೊಳವೆ ಬಾವಿ’ ಕೊರೆದರೆ ಕ್ರಿಮಿನಲ್ ಕೇಸ್

ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸದ್ಯಕ್ಕೆ ಹೊಸ ಕೊಳವೆ ಬಾವಿ ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ನಿಯಮ...

ಕೋಲಾರ| ಹೆಚ್ಚಿನ ಕಾಳಜಿ ವಹಿಸಿ ಸಾವಿನ ಪ್ರಮಾಣ ತಗ್ಗಿಸಿ: ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್

ಕೋಲಾರ:  ಸಕ್ಕರೆ ಕಾಯಿಲೆ, ಹೆಚ್.ಐ.ವಿ, ಟಿ.ಬಿ ಪೇಷೆಂಟ್ಸ್, 60 ವರ್ಷ ದಾಟಿದವರು, ಹೃದಯ ಸಂಬಂಧಿ ಖಾಯಿಲೆಗಳು ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಕಾಳಜಿ ವಹಿಸುವ ಮೂಲಕ ಸಾವಿನ ಪ್ರಮಾಣ ತಗ್ಗಿಸಬೇಕು ಎಂದು...

ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ 128 ಜನರಲ್ಲಿ ಕೊರೋನಾ ಸೋಂಕು ದೃಢ, 119 ಮಂದಿ ಗುಣಮುಖ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 128 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾದ 119 ಜನರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 337 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 867 ಸಕ್ರಿಯ ಪ್ರಕರಣಗಳಿದ್ದು,...

ಸರ್ಕಾರದ ಮಾನದಂಡಗಳಡಿ 1761 ರೈತರು ಸಾಲಮನ್ನಾಗೆ ಅನರ್ಹ, 22745 ರೈತರಿಗೆ ಸೌಲಭ್ಯ: ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:  ಸರ್ಕಾರ ಸೂಚಿಸಿರುವ ಮಾನದಂಡಗಳಡಿ ಜಿಲ್ಲೆಯ ೨೨೭೪೫ ಮಂದಿಯ ಸಾಲ ಮನ್ನಾ ಆಗಿದೆ, ಉಳಿದಂತೆ ಸಾಲ ಮನ್ನಾಗೆ ಅರ್ಹರಲ್ಲದ ಅವಿಭಜಿತ ಜಿಲ್ಲೆಯ ೧೭೬೧ ರೈತರು ಕೂಡಲೇ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ಕೋಲಾರ,ಚಿಕ್ಕಬಳ್ಳಾಪುರ...

Don't Miss

ಇನ್ಮುಂದೆ ರಾಜ್ಯದ ಈ 15 ಜಿಲ್ಲೆಗಳಲ್ಲಿ ‘ಕೊಳವೆ ಬಾವಿ’ ಕೊರೆದರೆ ಕ್ರಿಮಿನಲ್ ಕೇಸ್

ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸದ್ಯಕ್ಕೆ ಹೊಸ ಕೊಳವೆ ಬಾವಿ ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ನಿಯಮ...

ಕೋಲಾರ| ಹೆಚ್ಚಿನ ಕಾಳಜಿ ವಹಿಸಿ ಸಾವಿನ ಪ್ರಮಾಣ ತಗ್ಗಿಸಿ: ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್

ಕೋಲಾರ:  ಸಕ್ಕರೆ ಕಾಯಿಲೆ, ಹೆಚ್.ಐ.ವಿ, ಟಿ.ಬಿ ಪೇಷೆಂಟ್ಸ್, 60 ವರ್ಷ ದಾಟಿದವರು, ಹೃದಯ ಸಂಬಂಧಿ ಖಾಯಿಲೆಗಳು ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಕಾಳಜಿ ವಹಿಸುವ ಮೂಲಕ ಸಾವಿನ ಪ್ರಮಾಣ ತಗ್ಗಿಸಬೇಕು ಎಂದು...

ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ 128 ಜನರಲ್ಲಿ ಕೊರೋನಾ ಸೋಂಕು ದೃಢ, 119 ಮಂದಿ ಗುಣಮುಖ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 128 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾದ 119 ಜನರನ್ನು ಬಿಡುಗಡೆ ಮಾಡಲಾಗಿದೆ. ಸೋಂಕಿತ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 337 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 867 ಸಕ್ರಿಯ ಪ್ರಕರಣಗಳಿದ್ದು,...
error: Content is protected !!