Wednesday, August 10, 2022

Latest Posts

ಮಹಿಳೆಯರು, ಮಕ್ಕಳು, ಹದಿಹರೆಯದವರ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ ಕೊರೊನಾ: ಡಬ್ಲ್ಯೂಹೆಚ್‌ಒ ಕಳವಳ

ಜಿನೀವಾ: ವಯೋವೃದ್ಧರ ಮೇಲೆ ಕ್ರಿನೆರಳು ಚಾಚುವ ಕೊರೋನಾ, ಮಹಿಳೆಯರು, ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಪರೋಕ್ಷ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌, ಕೊರೊನಾ ವೈರಸ್‌ ಜಾಗತಿಕವಾಗಿ ಆರೋಗ್ಯ ವ್ಯವಸ್ಥೆಗೆ ಭಾರಿ ಹಾನಿ ಉಂಟು ಮಾಡಿದೆ. ಈ ಸೋಂಕಿನಿಂದ ಮಹಿಳೆಯರು ಗರ್ಭಿಣಿಯಾಗಿದ್ದಾಗ ಹಾಗೂ ಹೆರಿಗೆಯಾಗುವ ಸಂದರ್ಭದಲ್ಲಿ ಸಾಯುವ ಸಾಧ್ಯತೆಗಳು ಹೆಚ್ಚಾಗಿದೆ. ಸೋಂಕಿನಿಂದ ಸಾವನ್ನಪ್ಪುವವರಿಗಿಂತಲೂ ಈ ವರ್ಗದವರ ಮೇಲೆ ಕೊರೊನಾ ಹೆಚ್ಚು ದುಷ್ಪರಿಣಾಮ ಬಿರಲಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಬಾಧಿಸಿದ ಬಳಿಕ ಜಾಗತಿಕವಾಗಿ ಶಾಲಾ – ಕಾಲೇಜು ಮುಚ್ಚಲಾಗಿದೆ. ಇದರಿಂದ ಶಿಕ್ಷಣ ಉದ್ಯೋಗಕ್ಕೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗಲಿದೆಯಲ್ಲದೆ ಮಕ್ಕಳು ಹಾಗೂ ಹದಿಹರೆಯದವರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಅವರ ಮೇಲೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಶಂಕಿತ ಹಾಗೂ ಸೋಂಕಿತ ತಾಯಂದಿರು ಮಗುವಿಗೆ ಹಾಲುಣಿಸಲು ಯಾವುದೇ ಭಯಪಡಬೇಕಾಗಿಲ್ಲ. ಹಾಲುಣಿಸುವುದರಿಂದ ಮಗುವಿಗೆ ಯಾವುದೇ ಅಪಾಯವಿಲ್ಲ. ಅನಾರೋಗ್ಯ ಕಾರಣ ಮುಂದಿಟ್ಟು ತಾಯಿ ಮಗುವನ್ನು ದೂರ ಮಾಡಬಾರದು ಎಂದವರು ಕಿವಿಮಾತು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss