Wednesday, August 10, 2022

Latest Posts

ಮಹಿಳೆಯರು, ಮಕ್ಕಳ ಸುರಕ್ಷತೆಗೆ ಗಸ್ತು ತಿರುಗಲು7 ಹೊಸ ಹೋಂಡಾ ಮೋಟಾರ್ ಬೈಕ್

ಹೊಸ ದಿಗಂತ ವರದಿ, ಶಿರಸಿ:

ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಶರಾವತಿ ಪಡೆಗೆ ಗಸ್ತು ತಿರುಗಲು ಶಿರಸಿ ಉಪವಿಭಾಗದ ಎಲ್ಲಾ ಠಾಣೆಗಳಿಗೆ ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ. ಶಿವಪ್ರಕಾಶ್ ದೇವರಾಜು ಅವರು 7 ಹೊಸಾ ಹೋಂಡಾ ಮೋಟಾರ್ ಬೈಕ್ ವಿತರಿಸಿದ್ದು, ಸದರಿ ಬೈಕ್ ಗಳನ್ನು ಶಿರಸಿ ಡಿಎಸ್ಪಿ ರವಿ.ಡಿ.ನಾಯ್ಕ ಸಿರಸಿಯ ಮಾರಿಕಾಂಬ ದೇವಾಲಯದಿಂದ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಸದರಿ ಗಸ್ತು ವಾಹನ ಮಹಿಳೆಯರು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಗಸ್ತು ಮಾಡುವುದು.
ಈ ವಾಹನದ ಸಿಬ್ಬಂದಿ ಶಾಲೆ ಕಾಲೆಜು ಮಾರುಕಟ್ಟೆ ಕಾರ್ಮಿಕ ವಲಯಗಳಲ್ಲಿ ಸಂಚರಿಸಲಿದ್ದು, ಪೋಲಿಸ್ ಸೇವೆಯ ಬಲವರ್ಧನೆ ಮಾಡಲಿದ್ದು, ಸಾರ್ವಜನಿಕರ ದೂರು ಕರೆಗಳಿಗೆ ಸ್ಪಂದಿಸಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss