Friday, July 1, 2022

Latest Posts

ಮಹಿಳೆಯರೇ… ದಿನದಲ್ಲಿ 10 ನಿಮಿಷ ಮಾಡಿ ಪೃಥ್ವಿ ಮುದ್ರೆ.. ಇದರಿಂದ ಸಾಕಷ್ಟು ಲಾಭವಿದೆ..

ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಕೂದಲು ಉದುರುವುದು ಮತ್ತು ಪೀರಿಯಡ್ಸ್ ಸಮಸ್ಯೆ. ಈ ಎಲ್ಲ ಸಮಸ್ಯೆಗಳಿಗೂ ಒಂದರಲ್ಲಿಯೇ ಇದೆ ಪರಿಹಾರ. ಅದು ಪೃಥ್ವಿ ಮುದ್ರೆ. ಪ್ರತಿ ದಿನ 10 ರಿಂದ 20 ನಿಮಿಷ ಈ ಮುದ್ರೆ ಮಾಡಿ. ಮೂಳೆ , ಮಾಂಸ, ಚರ್ಮ,ನಾಡಿ ಸೇರಿದಂತೆ ನಿಮ್ಮೆಲ್ಲ ಸಮಸ್ಯೆಗೆ ಇಲ್ಲಿದೆ ಪರಿಹಾರ..

ಮಾಡುವ ವಿಧಾನ:

  • ಹೆಬ್ಬೆರಳಿನ ತುದಿಗೆ ಉಂಗುರ ಬೆಳನ್ನು  ಸೇರಿಸಿ.
  • ಉಳಿದ ಬೆರಳುಗಳನ್ನು ನೇರವಾಗಿ ಇಡಿ.

ಪ್ರಯೋಜನಗಳು…

  • ದೇಹ ಮತ್ತು ಮಸ್ಸಿನ ದೌರ್ಬಲ್ಯವನ್ನು ಗುಣಪಡಿಸುತ್ತದೆ.
  • ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
  • ದೇಹ ಚುರುಕಾಗಿ ಮುಖಕ್ಕೆ ಒಂದು ಹೊಳಪು ಬರುತ್ತದೆ.
  • ಮನಸ್ಸಿಗೆ ಶಾಂತಿ ನೆಮ್ಮದಿ, ದೊರಕುತ್ತದೆ.
  • ಶರೀರದಲ್ಲಿರುವ ಕಲ್ಮಶಗಳನ್ನು ವಿಸರ್ಜಿಸುವ ಕಾರ್ಯವನ್ನು ಸಮರ್ಥವಾಗಿ ನಡೆಸುತ್ತದೆ.
  • ಪಿತ್ತ ದೋಷ ನಿವಾರಣೆಯಾಗುತ್ತದೆ.
  • ಬಾವು ಕಡಿಮೆಯಾಗುತ್ತದೆ ಮತ್ತು ಸ್ನಾಯುಗಳ ಬಲವರ್ಧನೆಯಾಗುತ್ತದೆ.
  • ಶರೀರದಲ್ಲಿ ತೂಕ ಹೆಚ್ಚಾಗಲು ಸಹ ಈ ಮುದ್ರೆ ನೆರವಾಗುತ್ತದೆ.
  • ಪೀರಿಯಡ್ಸ್ ದಿನಗಳಲ್ಲಿ ಬರುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss