Saturday, August 13, 2022

Latest Posts

ಮಹಿಳೆಯರ ಜೀವ-ಜೀವನೋಪಾಯದ ಹಕ್ಕುಗಳಿಗಾಗಿ ಒತ್ತಾಯಿಸಿ ಜನವಾದಿ ಪ್ರತಿಭಟನೆ

ಮಂಡ್ಯ : ಮಹಿಳೆಯರ ಜೀವ, ಜೀವನೋಪಾಯ ಮತ್ತು ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತೆಯರು, ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಕೋವಿಡ್-19ರ ಪರಿಣಾಮವನ್ನು ತಗ್ಗಿಸಲು ಎಲ್ಲಾ ಕಾರ್ಯಪಡೆ, ಸಮಿತಿಗಳಲ್ಲಿ ಶೇ. 50ರಷ್ಟು ಮಹಿಳೆಯರ ಪ್ರಾತಿನಿಧ್ಯವನ್ನು ಖಚಿತಪಡಿಸಬೇಕು. ಶೇ. 50ರಷ್ಟು ಮಹಿಳಾ ಸದಸ್ಯರೊಂದಿಗೆ ಕೋವಿಡ್ ತಗ್ಗಿಸುವಿಕೆಗಾಗಿ ಪ್ರಧಾನಿ ಸ್ಥಾಪಿಸಿದ ಕಾರ್ಯಪಡೆಯನ್ನು ಪುನರ್ ನಿರ್ಮಿಸಬೇಕು. ಅಪೌಷ್ಠಿಕ ಮತ್ತು ಹಸಿವಿನ ಸಾವುಗಳನ್ನು ನಿಯಂತ್ರಿಸಲು ಪ್ರತಿ ಕಾರ್ಡ್‍ಡಾರರು ಮತ್ತು ಕಾರ್ಡ್‍ರಹಿತರಿಗೆ ತೊಗರಿಬೇಳೆ, ಅಡುಗೆ ಎಣ್ಣೆ ಮತ್ತು ಇತರೆ ಅಗತ್ಯ ಸಾಮಗ್ರಿಗಳ ಜೊತೆಗೆ ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ. ಧಾನ್ಯಗಳನ್ನು ಸಾಂಕ್ರಾಮಿಕ ರೋಗ ಪೂರ್ಣ ನಿಯಂತ್ರಣವಾಗುವವರೆಗೂ ವಿತರಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಇದಕ್ಕೆ ಬಜೆಟ್‍ನಲ್ಲಿ ಪ್ರತ್ಯೇಕ ವಿಶೇಷ ಅನುದಾನ ನೀಡಬೇಕು. ನಿರ್ಭಯಾ ನಿಧಿಯನ್ನು ಬೇರೆ ಯಾವುದಕ್ಕೂ ಬಳಸದೇ ಲೈಂಗಿಕ ದೌರ್ಜನ್ಯದಿಂದ ಬದುಕುಳಿದ ಮಹಿಳೆಯರ ಸಬಲೀಕರಣಕ್ಕಾಗಿ ಬಳಸುವಂತಾಗಬೇಕು. ಸ್ವ ಸಹಾಯ ಸಂಘಗಳಲ್ಲಿ ತೆಗೆದುಕೊಂಡ ಬಡ್ಡಿ ಮತ್ತು ಸಾಲಗಳನ್ನು ಮನ್ನಾ ಮಾಡುವುದು, ಸಾಲ ಮುಕ್ತ ಮಾತ್ರವಲ್ಲದೆ, ಸ್ವಸಹಾಯ ಸಂಘ ಮತ್ತು ಮಹಿಳಾ ರೈತರಿಗೆ ಬಡ್ಡಿ ರಹಿತ ಸಾಲವನ್ನು ತಕ್ಷಣ ನೀಡಬೇಕು. ಎಂಎಫ್‍ಐ ಸಂಗ್ರಹ ಏಜೆಂಟರುಗಳಿಂದ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಮರರೇಗಾ ಯೋಜನೆಯನ್ನು ಕೆಲಸದ ಬೇಡಿಕೆಧಾರದಲ್ಲಿ ಕೆಲಸದ ವಿಸ್ತರಣೆ ಹಾಗೂ ದಿನದ ವೇತನ ರೂ 600 ರೂ.ಗಳಿಗೆ ಹೆಚ್ಚಳ ಮಾಡಿ, ಸರಿಯಾದ ಸಮಯಕ್ಕೆ ಕೂಲಿ ಖಾತ್ರಿಪಡಿಸಬೇಕು. ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿಗೆ ತರಬೇಕು. ನಗರ ಪ್ರದೇಶಗಳಲ್ಲಿನ ಎಲ್ಲಾ ನಿರುದ್ಯೋಗಿಗಳಿಗೆ 10 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು. ಪ್ರಧಾನಿ ಘೋಷಣೆಯ ಬಾಡಿಗೆ ಮನೆಯಲ್ಲಿ ವಲಸೆ ಮಹಿಳಾ ಕಾರ್ಮಿಕರಿಗೆ ಶೇ. 50ರಷ್ಟು ನೀಡಬೇಕು ಎಂದು ಆಗ್ರಹಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss