spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಮಹಿಳೆಯರ ಸುಲಿಗೆ ಮಾಡುತ್ತಿದ್ದ ಸಹೋದರರಿಗೆ ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯ

ಉಡುಪಿ: ಮಹಿಳೆಯರ ಸುಲಿಗೆ ಮಾಡಿ ಸರಗಳ್ಳತನ ಮಾಡುತ್ತಿದ್ದ ಸಹೋದರರಿಬ್ಬರಿಗೆ ಉಡುಪಿಯ 3ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎ್.ಸಿ. ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿರ್ವದ ಸಹೋದರರಾದ ರವಿರಾಜ್ ದೇವಾಡಿಗ ಮತ್ತು ಪ್ರಕಾಶ್ ದೇವಾಡಿಗ ಎರಡು ವರ್ಷಗಳಲ್ಲಿ ನಾಲ್ವರು ಮಹಿಳೆಯರ ಸುಲಿಗೆ ಮಾಡಿದ ಪ್ರಕರಣ ಸಾಬೀತಾಗಿದೆ. ಇಬ್ಬರೂ 2012ರಿಂದ 2014ರವರೆಗೆ ಶಿರ್ವ ಗ್ರಾಮದ ಮೇಲ್ ಬೆಳಂಜಾಲು, ತೊಟ್ಲಗುರಿ, ಸೈಂಟ್ ಮೇರೀಸ್ ಚರ್ಚ್ ಆವರಣದಲ್ಲಿರುವ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಮತ್ತು ಪೀಲಾರು ಗ್ರಾಮದ ಕುತ್ಯಾರುವಿನಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಸುಲಿಗೆ ಮಾಡುತ್ತಿದ್ದರು.
ಚಾಲನಾ ಪರವಾನಗಿಯೂ ಹೊಂದದೇ ಕೆಎ-20-ಎಸ್-7898 ಮತ್ತು ಕೆಎ-20-ಜೆ-9250 ನೋಂದಣಿ ಸಂಖ್ಯೆಯ ಬೈಕುಗಳಲ್ಲಿ ಹಿಂಬಾಲಿಸಿಕೊಂಡು ಬಂದು ಮಹಿಳೆಯರು ಧರಿಸಿದ್ದ ಚಿನ್ನದ ಸರವನ್ನು ಬಲವಂತವಾಗಿ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಆಗಿನ ಕಾಪು ವೃತ್ತದ ವೃತ್ತ ನಿರೀಕ್ಷಕ ಸುನೀಲ್ ವೈ. ನಾಯಕ್ ತನಿಖೆ ನಡೆಸಿ ಆರೋಪಿಗಳ ಚಹರೆಯನ್ನು ದೂರುದಾರರ ಸಹಾಯದಿಂದ ಚಿತ್ರ ಬಿಡಿಸಿ ಅವರೇ ಆರೋಪಿಗಳೆಂದು ಮೊಬೈಲ್ ಲೊಕೇಶನ್ ಮೂಲಕ ದೃಢೀಕರಿಸಿ ಆರೋಪಿಗಳನ್ನು 2014ರ ಏಪ್ರಿಲ್ 12ರಂದು ಬಂಧಿಸಿದ್ದರು. ಬಳಿಕ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ನಾಲ್ಕು ಪ್ರಕರಣಗಳು ಉಡುಪಿಯ 3ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎ್.ಸಿ. ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆದಿವೆ. ಎಲ್ಲ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತರ ಮೇಲಿನ 4 ಪ್ರಕರಣಗಳು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಹಂತೇಶ್ ಬೂಸಗೋಳ ಅವರು ಅಪರಾಧಿಗಳಿಗೆ 3ಪ್ರಕರಣಗಳಲ್ಲಿ ಕ್ರಮವಾಗಿ 1ವರ್ಷ 6ತಿಂಗಳುಗಳ ಶಿಕ್ಷೆ ಮತ್ತು 4ನೇ ಪ್ರಕರಣದಲ್ಲಿ 3ವರ್ಷ 9ತಿಂಗಳು ಶಿಕ್ಷೆ ಮತ್ತು 9500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಎಲ್ಲಾ ಪ್ರಕರಣಗಳಲ್ಲಿ ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap