ಹೊಸದಿಗಂತ ಆನ್ ಲೈನ್ ಡೆಸ್ಕ್:
ಮದುವೆಯ ಭರವಸೆ ನೀಡಿ ಮಹಿಳೆಯ ಒಪ್ಪಿಗೆಯೊಂದಿಗೆ ದೀರ್ಘಕಾಲದ ದೈಹಿಕ ಸಂಬಂಧ ಹೊಂದುವುದನ್ನು ಅತ್ಯಾಚಾರ ಅಂತಾ ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಗುರುವಾರ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್,ದೈಹಿಕ ಕಿರುಕುಳದ ಉದ್ದೇಶದಿಂದ ಮಾತ್ರ ಮದುವೆಯಾಗುವ ನೆಪವನ್ನು ಮಾಡಿದರೆ ಅದು ಅತ್ಯಾಚಾರವಾಗಬಹುದು. ಆದರೆ ಯಾರೊಂದಿಗಾದರೂ ದೀರ್ಘ ಕಾಲದವರೆಗೆ ನಿಕಟ ಸಂಬಂಧ ಹೊಂದಿರುವುದು ಮತ್ತು ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರದ ವರ್ಗಕ್ಕೆ ಬರುವುದಿಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಮದುವೆಯ ಭರವಸೆ ನೀಡಿ ಮಹಿಳೆಯ ಒಪ್ಪಿಗೆಯೊಂದಿಗೆ ವ್ಯಕ್ತಿವೋರ್ವ ದೀರ್ಘಕಾಲ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆ ವ್ಯಕ್ತಿ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಮಹಿಳೆಯ ಮನವಿಯನ್ನು ವಜಾಗೊಳಿಸಿ ಆರೋಪಿಯನ್ನು ಖುಲಾಸೆಗೊಳಿಸಿತು.