Tuesday, August 16, 2022

Latest Posts

ಮಾಂಸಕ್ಕಾಗಿ ಜಿಂಕೆಯನ್ನು ಬೇಟೆಯಾಡುತ್ತಿದ್ದ 6 ಜನರ ಬಂಧನ

ಹೊಸ ದಿಗಂತ ವರದಿ, ಮೈಸೂರು:

ಮಾಂಸಕ್ಕಾಗಿ ಜಿಂಕೆಯನ್ನು ಬೇಟೆಯಾಡುತ್ತಿದ್ದ 6 ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಮೈಸೂರು
ಜಿಲ್ಲೆಯ ನಂಜನಗೂಡಿನ ನಾಗಣಾಪುರ ಗ್ರಾಮದಲ್ಲಿ ನಡೆದಿದೆ.
ಕೊಡುಗು ಜಿಲ್ಲೆಯ ಸೋಮವಾರಪೇಟೆಯ 6 ಮಂದಿ ಬೇಟೆಗಾರರನ್ನು ಅರಣ್ಯ ಇಲಾಖೆಯ ಆರ್.ಎಫ್.ಒ ನಾಗೇಂದ್ರ ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನಂಜನಗೂಡು ತಾಲೂಕಿನ ನಾಗಣಾಪುರ ಗ್ರಾಮದ ಬಸವರಾಜು ಎಂಬುವರ ತೋಟದ ಮನೆಯಲ್ಲಿದ್ದ ಬೇಟೆಗಾರರನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿoದ ಬೇಟೆಗೆ ಬಳಸಿದ್ದ ಸಲಕರಣೆಗಳು, 3 ಜಿಂಕೆ ಹಾಗೂ ಓಮಿನಿ ಕಾರು ಮತ್ತು ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss