ಹೊಸ ದಿಗಂತ ವರದಿ, ಮೈಸೂರು:
ದುಷ್ಕರ್ಮಿಗಳು ಮಾಂಸಕ್ಕಾಗಿ ನಾಲ್ಕು ಜಿಂಕೆಗಳನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಓಂಕಾರ ಅರಣ್ಯದಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾಗ ಕಿಡಿಗೇಡಿಗಳು ಜಿಂಕೆಗಳನ್ನು ಹತ್ಯೆ ಮಾಡಿ, ಮಾಂಸ ಕೊಂಡೊಯ್ದಿದ್ದಾರೆ. ರಕ್ತದ ಕಲೆ, ಬಟ್ಟೆ, ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಜಿಂಕೆ ಹಂತಕರ ಬಂಧನಕ್ಕಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.