ವಾಷಿಂಗ್ಟನ್: ವುಹಾನ್ನಲ್ಲಿ ಮತ್ತೆ ಕೊರೋನಾ ಮಹಾಮಾರಿ ಮತ್ತೆ ವಿಷಮಿಸಿದ್ದು ಇದನ್ನು ಪ್ರಶ್ನಿಸಿದ ಜನತೆಯನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ಕಳುಹಿಸಲಾಗುತ್ತಿದೆ.
ವುಹಾನ್ ಲಾಕ್ಡೌನ್ನಂತರ ಅಮೆರಿಕ ಮಾಧ್ಯಮ ವೃಂದ ಇಲ್ಲಿ ಮೊಕ್ಕಾಂ ಹೂಡಿದ್ದು, ಚೀನಾ ಸರ್ಕಾರವನ್ನು ಪ್ರಶ್ನಿಸಿದವರೆಲ್ಲರನ್ನೂ ಬಂಧನಕ್ಕೊಳಪಡಿಸಲಾಗಿದೆ ಎಂದು ಅಮೆರಿಕ ಮಾಧ್ಯಮ ನೇರವಾಗಿ ಆರೋಪಿಸಿದೆ. ಕೆಲ ನ್ಯಾಯವಾದಿಗಳು, ಹೋರಾಟಗಾರರನ್ನು ಬಂಧಿಸಿ ಅವರನ್ನು ಮಾನಸಿಕ, ದೈಹಿಕವಾಗಿ ಹಿಂಸೆಗೆ ಗುರಿಪಡಿಸಲಾಗಿದೆ ಎಂದು ಟಿವಿ ಸುದ್ದಿಜಾಲಗಳು ವರದಿ ಮಾಡಿವೆ. ಎರಡು ವಾರಗಳ ಹಿಂದೆಯಷ್ಟೆ ವುಹಾನ್ನಲ್ಲಿ ಲಾಕ್ಡೌನ್ ಸಂಪೂರ್ಣ ಸಡಿಲಗೊಂಡಿದ್ದು ಅಲ್ಲಿನ ಮಾಂಸದ ಮಾರುಕಟ್ಟೆ ವಹಿವಾಟು ಕೂಡಾ ಈಗ ಎಂದಿನಂತೆ ಶುರುವಾಗಿದೆ. ಆದರೆ ಅಮರಿಕ, ಬ್ರಿಟನ್ ಸೇರಿದಂತೆ ಬಹುತೇಕ ಐರೋಪ್ಯ ದೇಶಗಳು ವುಹಾನ್ ಮಾಂಸದ ಮಾರುಕಟ್ಟೆಯನ್ನು ಇನ್ನೂ ಕೆಲ ತಿಂಗಳು ಕಾಲ ಮುಚ್ಚಲು ಆದೇಶ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಆಗ್ರಹಿಸಿವೆ.