spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಾಗಡಿ: ಜಿಲ್ಲಾ ಅಧ್ಯಕ್ಷರಾಗಿ ಸಿ.ಶಂಕರ್ ನೇಮಕ

- Advertisement -Nitte

ಮಾಗಡಿ : ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಕೆ.ಪುಟ್ಟನರಸಪ್ಪ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಗಡಿ ಸಿ.ಶಂಕರ್, ಜಿಲ್ಲಾ ಕಾರ್ಯದರ್ಶಿಯನ್ನಾಗಿ ದಯಾನಂದ್, ಬಂಡೆ ಲೋಕೇಶ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಹುಲುವಾಡಿ ದೇವರಾಜು ನೇಮಕಮಾಡಿದ್ದಾರೆ.

ಕಳೆದ ಒಂದು ವಾರದ ಹಿಂದೆ ತಾಲೂಕು ಅಧ್ಯಕ್ಷ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಮಾಡಲಾಗಿದ್ದು ಭಾನುವಾರ ಮತ್ತೆ ಇತರೆ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ.

ಪ್ರತಿ ಮೂರು ವರ್ಷಕ್ಕೊಮ್ಮೆ ತಾಲೂಕು ಅಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗುತ್ತಿದ್ದು ಅದರಂತೆ ಮುಂದಿನ ಮೂರು ವರ್ಷಗಳ ಅವಧಿಗೆ ತಾ.ಅಧ್ಯಕ್ಷರನ್ನಾಗಿ ಬಿ.ಎಂ.ಕರಲಮಂಗಲ ಧನಂಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜೇಶ್ ಅವರನ್ನು ನೇಮಕಮಾಡುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಜಿಲ್ಲಾಧ್ಯಕ್ಷರು ಕರೆ ನೀಡಿದ್ದಾರೆ.

ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಗಡಿ ಸಿ.ಶಂಕರ್ ಮಾತನಾಡಿ, ಕಳೆದ ಭಾರಿ ಒಂದುವರೆ ವರ್ಷಗಳ ಕಾಲ ಯುವಮೋರ್ಚಾ ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿತ್ತು ಈ ವೇಳೆ ಪಕ್ಷದ ಸಂಘಟನೆಗೆ ಒತ್ತು ನೀಡಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಮತ್ತೊಮ್ಮೆ ಎರಡನೇ ಭಾರಿ ನೇಮಕಮಾಡಿರುವುದು ಸಂತೋಷವಾಗಿದ್ದು, ಈ ಭಾರಿ ಜಿಲ್ಲಾಧ್ಯಕ್ಷ ಡಾ.ಹುಲುವಾಡಿ ದೇವರಾಜು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆಮಾಡುವುದೆ ನಮ್ಮ ಮುಂದಿನ ಗುರಿಯಾಗಿದೆ ಎಂದರು.

ತಾಲೂಕು ಅಧ್ಯಕ್ಷ ಬಿ.ಎಂ.ಕರಲಮಂಗಲ ಧನಂಜಯ ಮಾತನಾಡಿ, ಪಕ್ಷ ನೀಡಿರುವ ಜವಬ್ದಾರಿಗೆ ಧಕ್ಕೆ ಬಾರದಂತೆ ಪ್ರಮಾಣಿಕವಾಗಿ ಪಕ್ಷವನ್ನು ಬೂತ್ ಮಟ್ಟದಿಂದ ಸದೃಢವಾಗಿ ಕಟ್ಟಿ ತಳಮಟ್ಟದ ಕಾರ್ಯಕರ್ತರಿಗೂ ಶಕ್ತಿ ತುಂಬುವ ಕೆಲಸಮಾಡುತ್ತೇವೆ, ನಮ್ಮ ಪಕ್ಷದಲ್ಲಿ ಎಲ್ಲರೂ ಒಂದೆ, ಕಲ್ಯಾಣ ಕರ್ನಾಟಕ ಹಾದಿಯಲ್ಲಿ ಸಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಾದಿಯಲ್ಲಿ ನಾವು ಮುನ್ನೆಡೆಯುತ್ತೇವೆ, ಕೇಂದ್ರ,ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲತ್ತು ಸಿಗುವಂತೆ ಮಾಡುತ್ತೇವೆ ಈ ಸಂಬಂಧ ಸರಕಾರದ ಸೌಲತ್ತುಗಳ ಬಗ್ಗೆ ಪ್ರತಿ ಊರುಗಳಲ್ಲಿ ನಾಗರೀಕರಿಗೆ ತಿಳಿಸುವಂತಹ ಕೆಲಸಮಾಡುತ್ತೇವೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss