ಮಾಗಡಿ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ಬಿ.ಎಂ.ಧನಂಜಯ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಈಗಾಗಲೇ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದ್ದು ಕರೋನಾ ದಿಂದಾಗಿ ಮುಂದೂಡಲಾಗಿದ್ದು, ಪಕ್ಷದಲ್ಲಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುವ ಕಾರ್ಯಕರ್ತರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಹಲವು ಮೋರ್ಚಾಗಳಿಗೆ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ, ತಳ ಮಟ್ಟದಲ್ಲಿ ಪಕ್ಷದ ಪರವಾಗಿ ದುಡಿಯುವ ಕಾರ್ಯಕರ್ತನನ್ನು ಗುರುತಿಸಿ ರಾಜಕೀಯ ಸ್ಥಾನ ಮಾನಯಾವುದಾದರು ಪಕ್ಷ ನೀಡುತ್ತಿದೆ ಎಂದರೆ ಅದು ಬಿಜೆಪಿ ಪಕ್ಷ ಎಂದರು.
ತಾ.ಉಪಾಧ್ಯಕ್ಷರಾಗಿ ಉಪಾರ್ತಿ ಎಂ. ವೀರಭದ್ರಯ್ಯ, ಕೂಟಗಲ್ಲು ಕೆ. ಜಗದೀಶ್, ಅರವಯ್ಯನದೊಡ್ಡಿ ಶ್ರೀನಿವಾಸ, ಮಾಗಡಿ ಜಯಮ್ಮ, ಗುಂಡಿಗೆರೆ ಕೆ.ಚಂದ್ರಶೇಖರಯ್ಯ, ದುಡುಪನಹಳ್ಳಿ ಹೆಚ್.ರಂಗನಾಥ.
ಪ್ರಧಾನ ಕಾರ್ಯದರ್ಶಿಗಳಾಗಿ ಹುಳ್ಳೇನಹಳ್ಳಿ ಮಂಜುನಾಥ, ಬಿಡದಿ ಸಂದೀಪ್ ರೆಡ್ಡಿ,
ಕಾರ್ಯದರ್ಶಿಗಳಾಗಿ ಮಾದಿಗೊಂಡನಹಳ್ಳಿ ಹರಿಪ್ರಸಾದ್, ಜಡೆನಹಳ್ಳಿ ಮರಿಸ್ವಾಮಿ, ಪಾಳ್ಯದಹಳ್ಳಿ ರಾಮ್ಪ್ರಸಾದ್, ಮಾಗಡಿ ಮಾರಯ್ಯ, ಬೆಟ್ಟದಾಸಿಪಾಳ್ಯ ಮಂಜುನಾಥ, ತಿರುಮಲೆ ಪಾಂಡುರಂಗಯ್ಯ.
ಖಜಾಂಚಿಯಾಗಿ ಮಾಗಡಿ ಮಂಜುನಾಥ. ಕಾರ್ಯಾಲಯ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ. ಮಾದ್ಯಮ ಪ್ರಮುಕರಾಗಿ ತಿರುಮಲೆ ಟಿಬಿ. ಭಾಸ್ಕರ್, ವಕ್ತಾರರಾಗಿ ಬಾಲಾಜಿ ಆನಂದ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಬಿಡದಿ ಮಂಜು ಆರಾಧ್ಯ.
ಯುವಮೋರ್ಚಾ ಅಧ್ಯಕ್ಷರಾಗಿ ಮಂಚನಬೆಲೆ ನಿರಂಜನ್, ಪ್ರಧಾನ ಕಾರ್ಯದರ್ಶಿಯಾಗಿ ಬಿಡದಿ ರಾಜೇಶ್.
ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ದೀಪ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಹೋಸಪೇಟೆ ಗೀತಾ ಸುರೇಶ್.
ರೈತಮೋರ್ಚಾ ಅಧ್ಯಕ್ಷರಾಗಿ ಚಕ್ರಭಾವಿ ಜಗದೀಶ್, ಪ್ರಧಾನ ಕಾರ್ಯದರ್ಶಿಯಾಗಿ ತಗ್ಗಿಕುಪ್ಪೆ ಶೇಷಾದ್ರಿ.
ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಐಯ್ಯಂಡಹಳ್ಳಿ ರಂಗನಾಥ, ಪ್ರಧಾನ ಕಾರ್ಯದರ್ಶಿಯಾಗಿ ಬಿಡದಿ ಮುತ್ತುರಾಜ್.
ಎಸ್ಟಿಮೋರ್ಚಾ ಅಧ್ಯಕ್ಷರಾಗಿ ನಾಯಕನಪಾಳ್ಯ ಸಿದ್ದಗಂಗಯ್ಯ,ಪ್ರಧಾನ ಕಾರ್ಯದರ್ಶಿಯಾಗಿ ಚಕ್ರಭಾವಿ ಜಿ.ಸೋಮಶೇಖರ್.