ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಾಜಿ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರನ್ನು ಉತ್ತರ ಪ್ರದೇಶದ ಲಖನೌದಲ್ಲಿ ಬಿಜೆಪಿ ಮುಖಂಡರು ಪಕ್ಷಕ್ಕೆ ಬರಮಾಡಿಕೊಂಡರು.
ಅರವಿಂದ್ ಕುಮಾರ್ ಶರ್ಮಾ ಕಳೆದ ಸುಮಾರು 20 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಅವರು ಮೋದಿಯ ಅತ್ಯಂತ ವಿಶ್ವಾಸಾರ್ಹ ಅಧಿಕಾರಿಗಳಲ್ಲಿ ಒಬ್ಬರು.
ಇನ್ನು ಜನವರಿ 28 ರಂದು ಉತ್ತರ ಪ್ರದೇಶದ ವಿಧಾನ ಪರಿಷತ್ತಿನ 12 ಸ್ಥಾನಗಳಿ ಗೆಚುನಾವಣೆ ನಡೆಯಲಿದ್ದು,ಶರ್ಮಾ ಅವರು ಕೂಡ ರೇಸ್ನಲ್ಲಿದ್ದಾರೆ.
1988ರ ಬ್ಯಾಚ್ನ ಗುಜರಾತ್ ಕೇಡರ್ನ ಅಧಿಕಾರಿಯಾದ ಶರ್ಮಾ ಮೂಲತಃ ಉತ್ತರಪ್ರದೇಶದ ಮಾವ್ ನಗರದವರು. 2001ರಲ್ಲಿ ಮೋದಿ ಗುಜರಾತ್ ಸಿಎಂ ಆದಾಗ ಶರ್ಮಾ ಅವರು ಕಾರ್ಯದರ್ಶಿಯಾಗಿದ್ದರು. ಬಳಿಕ 2014ರಲ್ಲಿ ಪ್ರಧಾನಿಯಾಗಿ ಮೋದಿ ಆಯ್ಕೆಯಾದಾಗ ಪ್ರಧಾನಿ ಕಾರ್ಯಾಲಯಕ್ಕೆ ಬಂದರು. ಮುಖ್ಯಮಂತ್ರಿಗಳ ಕಚೇರಿ ಹಾಗೂ ಪ್ರಧಾನಿ ಕಾರ್ಯಾಲಯ ಎರಡರ ಭಾಗವಾಗಿಯೂ ಕೆಲಸ ಮಾಡಿರುವ ಶರ್ಮಾ ಕಳೆದ 2 ದಶಕಗಳಲ್ಲಿ ತಮ್ಮ ಕಾರ್ಯಗಳ ಮೂಲಕ ಮೋದಿ ಅವರ ವಿಶ್ವಾಸ ಗಳಿಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.