ಹೊಸ ದಿಗಂತ ವರದಿ, ಶಿವಮೊಗ್ಗ:
ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮ ದಿನೋತ್ಸವದ ಅಂಗವಾಗಿ ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ರಾಘವೇಂದ್ರಸ್ವಾಮಿ ಮಠದ ಮುಂಭಾಗ ಕೂರುವ ಬಡ ವಯೋವೃದ್ದರಿಗೆ ಸೀರೆ ಹಾಗೂ ಹೋದಿಕೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರವೀಣ್ ಕುಮಾರ್, ಮಹಾ ನಗರ ಪಾಲಿಕೆ ವಿರೋಧಪಕ್ಷದ ನಾಯಕ ಹೆಚ್ ಸಿ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ನಗರಾಧ್ಯಕ್ಷ ಹೆಚ್.ಪಿ. ಗಿರೀಶ್, ರಾಜ್ಯ ಕಾರ್ಯದರ್ಶಿಗಳಾದ ಟಿ.ವಿ ರಂಜಿತ್, ಆರ್. ಕಿರಣ್, ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕುಮರೇಶ್, ಪುಷ್ಪ ಕುಮಾರ್ , ಪದಾಧಿಕಾರಿಗಳಾದ ರಾಕೇಶ್, ಪವನ್, ಗಗನ್, ಪುರುಷೋತ್ತಮ್, ಆಕರ್ಷ ವಾಲ್ಮೀಕಿ, ಮುಖಂಡರಾದ ಸಿದ್ದಪ್ಪ, ಮಹೇಂದ್ರ ಜೈನ್ ಇತರರು ಇದ್ದರು.