Wednesday, July 6, 2022

Latest Posts

ಮಾಜಿ ಸಂಸದ ರಾಜ ರಂಗಪ್ಪನಾಯಕ ನಿಧನ

ಸುರಪುರ: ಮಾಜಿ ಸಂಸದ ರಾಜ ರಂಗಪ್ಪನಾಯಕ(61) ಭಾನುವಾರ ನಿದನರಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ರಾಯಚೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀ ರಾಜಾ ರಂಗಪ್ಪ ನಾಯಕ ಅವರ ನಿಧನದ ವಾರ್ತೆ ತಿಳಿದು ದುಃಖವಾಯಿತು. ಇವರ ಅಗಲಿಕೆಯಿಂದಾಗಿ ನನ್ನ ಆತ್ಮೀಯ ಮಿತ್ರರೊಬ್ಬರನ್ನು ಕಳೆದುಕೊಂಡ ನೋವು  ನನಗೆ ಕಾಡುತ್ತಿದೆ. ಸದಾ ಜನಪರವಾಗಿ ಕೆಲಸ ಮಾಡುತ್ತಿದ್ದ ರಂಗಪ್ಪ ನಾಯಕ ಅವರು ರಾಯಚೂರು ಮತ್ತು ಗುಲ್ಬರ್ಗ, ಯಾದಗಿರಿ ಜಿಲ್ಲೆಗಳ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಿದ್ದರು.

ಮೃತರ ಆತ್ಮಕ್ಕೆ ನಾನು ಶಾಂತಿ ಕೋರುತ್ತೇನೆ. ರಂಗಪ್ಪನಾಯಕ ಅವರ ಕುಟುಂಬ ವರ್ಗದವರಿಗೂ ನನ್ನ ಸಾಂತ್ವನ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.

1996ರಲ್ಲಿ ಜೆಡಿಎಸ್ ಮೂಲಕ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿದ್ದರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss