Wednesday, August 10, 2022

Latest Posts

ಮಾಜಿ ಸಚಿವ ಜಿ. ರಾಮಕೃಷ್ಣ ಅವರ ನಿಧನಕ್ಕೆ ಸಂಸದ ಡಾ ಉಮೇಶ್ ಜಾಧವ್, ಶಾಸಕ ಡಾ. ಅವಿನಾಶ್ ಜಾಧವ್ ಸಂತಾಪ

ಕಲಬುರಗಿ: ಮಾಜಿ ಮಂತ್ರಿ ಜಿ.ರಾಮಕೃಷ್ಣ ಅವರ ನಿಧನಕ್ಕೆ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹಾಗೂ ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದಿಗಳು, ಚತುರ ರಾಜಕೀಯ ನಾಯಕರೆಂದೇ ಗುರುತಿಸಿಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿ. ವೀರೇಂದ್ರ ಪಾಟೀಲ್ ರವರ ಬಲಗೈ ಭಂಟರಾಗಿ, ಅವರ ಅವರ ಸಂಪುಟದಲ್ಲಿಯೇ ವೈದ್ಯಕೀಯ ಮಂತ್ರಿಗಳಾಗಿ ಸೇವೆ ಸಲ್ಲಿಸಿ ರಾಜ್ಯ ನಾಯಕರಾಗಿ ಹೊರಹೊಮ್ಮಿದ್ದರು. ನನ್ನ ಒಡನಾಡಿಯಾದ ರಾಮಕೃಷ್ಣ ಅವರು, ಹಲವು ಬಾರಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸಿ ಜನಮನ್ನಣೆ ಪಡೆದುಕೊಂಡಿದ್ದರು ಎಂದು ಉಮೇಶ್ ಜಾಧವ್ ಅವರು ಗುಣಗಾನ ಮಾಡಿದ್ದಾರೆ.
ವಯೋಸಹಜ ಕಾಯಿಲೆಯಿಂದ
ನಿಧನರಾದ ಜಿ. ರಾಮಕೃಷ್ಣ ಸರ್ ಅವರ ಆತ್ಮಕ್ಕೆ ಭಗವಂತನು ಶಾಂತಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಅವರು ಪ್ರಾರ್ಥಿಸಿದ್ದಾರೆ.
ಸಮಸ್ತ ಕಲ್ಯಾಣ ಕರ್ನಾಟಕದ ವತಿಯಿಂದ, ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುವುದಾಗಿ ಉಭಯ ನಾಯಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss