Tuesday, July 5, 2022

Latest Posts

ಮಾಜಿ ಸಿಎಂ ಸಿದ್ದರಾಮಯ್ಯರ ತಲೆಯೇ ಅಲುಗಾಡುತ್ತಿದೆ: ಸಿ.ಟಿ.ರವಿ ಟೀಕೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಲೆ ಅಲುಗಾಡುತ್ತಿದೆ. ಆ ಕಾರಣಕ್ಕೆ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂದು ಕೊಂಡಿದ್ದಾರೆ ಎಂದು ಶಾಸಕರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ರವಿ, ಬಹಳ ಜನ ತಲೆ ಅಲ್ಲಾಡಿಸಿ ಜಗತ್ತು ಅಲ್ಲಾಡುತ್ತಿದೆ ಎಂದು ಕೊಳ್ಳುತ್ತಾರೆ. ಸಿದ್ದರಾಮಯ್ಯವರಿಗೂ ಇಂತಹದ್ದೇ ಭ್ರಮೆ ಎಂದರು.
ಗ್ರಾ.ಪಂ. ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಳಿರುವಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆದ್ದಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಶೇ.40 ರಷ್ಟು ಸ್ಥಾನಗಳನ್ನು ದಾಟಿರಲಿಲ್ಲ. ಈಗ ಅವರಿಗಿರುವ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಕಾಂಗ್ರೆಸ್‍ನಲ್ಲಿ ಪೈಪೋಟಿ ಆರಂಭವಾಗಿದೆ. ಅವರು ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ ಎನ್ನುವುದನ್ನು ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವ ಸ್ಥಿತಿಯಲ್ಲಿ ಅವರು ಹೇಗೆ ಹೆಚ್ಚು ಸ್ಥಾನಗಳಿಸಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ಆಯಾ ಜಿಲ್ಲೆಗಳಲ್ಲಿ ಬಿಜೆಪಿ ಬೆಂಬಲಿತರು ಎಷ್ಟು ಪ್ರಮಾಣದಲ್ಲಿ ಗೆದ್ದಿದ್ದಾರೆ ಎನ್ನುವುದನ್ನು ಮಾದ್ಯಮಗಳೇ ವಸ್ತುನಿಷ್ಠ ವರದಿ ಮಾಡಿವೆ. ಮುಂದೆ ಗ್ರಾಮ ಪಂಚಾಯ್ತಿ ಸದಸ್ಯರುಗಳನ್ನಾಧರಿಸಿಯೇ ಪರಿಷತ್ ಚುನವಣೆ ನಡೆಯಲಿದೆ. ಅಲ್ಲಿ ಕಾಂಗ್ರೆಸಿಗರು ಬಲಾ ಪ್ರದರ್ಶನ ನಡೆಸಲಿ. ಅವರು ಶೇ.60 ರಷ್ಟು ಪಂಚಾಯ್ತಿಗಳಲ್ಲಿ ಬೆಂಬಲಿತರನ್ನು ಗೆಲ್ಲಿಸಿಕೊಂಡಿದ್ದರೆ ಪರಿಷತ್ ಚುನಾವಣೆಯಲ್ಲೂ ಅಷ್ಠೇ ಪ್ರಮಾಣದಲ್ಲಿ ಗೆಲ್ಲಬೇಕಾಗುತ್ತದೆ. ಅದನ್ನೂ ನೋಡೋಣ ಎಂದರು.
ರಾಜ್ಯದಲ್ಲಿ ಸುಮಾರು 41 ಸಾವಿರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತರು ಪಂಚಾಯ್ತಿಗೆ ಆಯ್ಕೆಯಾಗಿದ್ದಾರೆ. ಶೇ.60 ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ. ಇದು ಸಂಭ್ರಮದ ಕ್ಷಣ. ಈ ಕಾರಣಕ್ಕೆ ಸದಸ್ಯರನ್ನು ಅಭಿನಂದಿಸಿದ್ದೇವೆ ಎಂದರು.
2023 ಕ್ಕೆ ವಿಧಾನಸಭಾ ಚುನಾವಣೆ ಸೇರಿದಂತೆ ಸರಣಿ ಚುನಾವಣೆಗಳು ಈಗ ನಡೆಯಲಿವೆ. ತಾ.ಪಂ.ಜಿ.ಪಂ. ನಗರಸಭೆ, ಪುರಸಭೆ, ಕಾರ್ಪೊರೇಷನ್ ಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ಪರಿಷತ್ತಿಗೆ ಹಾಗೂ ವಿವಿಧ ಕ್ಷೇತ್ರಗಳಿಗೆ ಉಪ ಚುನವಣೆಗಳು ನಡೆಯಲಿವೆ. ಅವರುಗಳನ್ನು ಗೆಲ್ಲುವ ಜೊತೆಗೆ ಜನಸ್ನೇಹಿ ಆಡಳಿತ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕಾದ ಹೊಣೆಗಾರಿಕೆ ಎಲ್ಲದರ ಬಗ್ಗೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕಾರಣಿಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss