ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆ ನೀಡಿ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಸುರೇಶ್ ಕುಮಾರ್ ಬಗ್ಗೆಯೂ ಮಾತನಾಡಿ ಸಚಿವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಮೊನ್ನೆ ಕೊಡವರು ಬೀಫ್ ತಿನ್ನುತ್ತಾರೆ ಎಂಬ ಸುಳ್ಳನ್ನು ಹೇಳಿ ನಂತರ ವಿಷಾದ ವ್ಯಕ್ತ ಪಡಿಸಿದ್ದ ರಾಜ್ಯದ ಪ್ರತಿಪಕ್ಷ ನಾಯಕರು, ಇಂದು ಶಿಕ್ಷಣ ಸಚಿವರು ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಶಾಮಿಲಾಗಿದ್ದಾರೆ ಎಂಬ ಮತ್ತೊಂದು ಸುಳ್ಳು ಹೇಳಿದ್ದಾರೆ. ಅವರಿಗೆ ಸತ್ಯ ಹೇಳುವ ಬುದ್ಧಿ ಬರಲಿ ಎಂದು ಸಿದ್ದು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆ
" ಕೊಡವರು ಬೀಫ್ ತಿನ್ನುತ್ತಾರೆ"
ಎಂಬ ಅಪ್ಪಟ ಸುಳ್ಳನ್ನು ಹೇಳಿ ನಂತರ ವಿಷಾದ ವ್ಯಕ್ತ ಪಡಿಸಿದ್ದ ರಾಜ್ಯದ ಪ್ರತಿಪಕ್ಷದ ನಾಯಕರು
ಇಂದು
ನಾನು (ಶಿಕ್ಷಣ ಸಚಿವ) " ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಶಾಮಿಲಾಗಿದ್ದೇನೆ" ಎಂಬ ಮತ್ತೊಂದು ಅಪ್ಪಟ ಅಸತ್ಯವನ್ನು ಹೇಳಿದ್ದಾರೆ.
ಅವರಿಗೆ ಸತ್ಯ ಹೇಳುವ ಬುದ್ಧಿ ಬರಲಿ.
— S.Suresh Kumar, Minister – Govt of Karnataka (@nimmasuresh) December 21, 2020