Wednesday, July 6, 2022

Latest Posts

ಮಾಡಿದ ತಪ್ಪಾದರೂ ಏನು?: ವೈರಾಣು ಪೀಡಿತ ಕುಟುಂಬ

ಬೀಜಿಂಗ್: ಇತ್ತೀಚೆಗಷ್ಟೇ ಚೀನಾದ ಎರ್ಚಾಮ್ ಹೋಟೆಲ್ ನಲ್ಲಿ 62 ವರ್ಷದ ವಾಂಗ್ ಕ್ಸಿಯಾಂಗ್ಯು ಎಂಬುವವರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದು, ಅವರ ಸಹೋದರ ಈ ಕುರಿತು ಮಾಧ್ಯಮಕ್ಕೆ ಮಾತನಾಡಿದ್ದಾರೆ.

ಇಂಥ ಶಿಕ್ಷೆ ಅನುಭವಿಸುವುದಕ್ಕೆ ತಾವು ಮಾಡಿದ ತಪ್ಪಾದರೂ ಏನು? ಎಂದು ಸಹೋದರ ವಾಂಗ್ ಕ್ಸಿಯಾಂಕೈ ಕೇಳಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ವಾಂಗ್ ಕ್ಸಿಯಾಂಕೈ ಹಾಗೂ ವಾಂಗ್ ಕ್ಸಿಯಾಂಗ್ಯು ಕೊರೋನಾ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ವುಹಾನ್ ನಲ್ಲಿರುವ ಎರ್ಚಾಮ್ ಹೋಟೆಲಿಗೆ ಕಳುಹಿಸಲಾಗಿತ್ತು. ಇವರು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕಾರಣ ತಿಳಿದುಕೊಳ್ಳಲು ವುಹಾನ್ ನ ಆಸ್ಪತ್ರೆಯೊಂದಕ್ಕೆ ತಪಾಸಣೆಗೆಂದು ತೆರಳಿದ್ದಾರೆ. ಈ ವೇಳೆ ಇಬ್ಬರಲ್ಲೂ ಕೊರೋನಾ ಕಂಡುಬಂದಿದೆ. ಕೇವಲ ಎರಡು ದಿನಗಳ ಹಿಂದೆ ಕ್ಸಿಯಾಂಕೈ ಸಹೋದರನನ್ನು ಕಳೆದುಕೊಂಡಿದ್ದಾರೆ.

ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಇಬ್ಬರು ಸಹೋದರರಿಗೂ ಕೊರೋನಾ ತಗುಲಿರುವುದು ಪತ್ತೆಯಾಗಿದೆ. ಇನ್ನೂ ಸಹೋದರನನ್ನು ಕಳೆದುಕೊಂಡಿರುವ ಹಿನ್ನೆಲೆ, ಕ್ಸಿಯಾಂಕೈ ಕೂಡ ಹೋಟೆಲ್ ನಿಂದ ಹೊರ ಬಂದಿದ್ದಾರೆ. ಇನ್ನೂ ಹೋಟೆಲ್ ನಲ್ಲಿದ್ದ ತನಕ ಕ್ಸಿಯಾಂಕೈ ಪತ್ನಿ ಪ್ರತಿದಿನ ಊಟ ತಿಂಡಿ ನೀಡಲು ಭೇಟಿ ನೀಡಿದ್ದು, ಈಗ ಈಕೆಯೂ ಸಹ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ವೈದ್ಯರು ಪತ್ನಿಗೂ ಕೊರೋನಾ ತಗುಲಿರುವ ಶಂಕೆ ವ್ಯಕ್ತಪಡಿಸಿದ್ದು, ಸಿಟಿ ಸ್ಕ್ಯಾನ್ ಇನ್ನೂ ಬಾಕಿಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss