Wednesday, August 10, 2022

Latest Posts

ಮಾಡಿದ ದೋಸೆ ಹೆಚ್ಚಾದರೆ ಚಿಂತಿಸುವುದು ಬೇಡ..! ದೋಸೆಯಿಂದ ರುಚಿಯಾದ ಉಪ್ಪಿಟ್ಟು ಮಾಡಬಹುದು..ಇಲ್ಲಿದೆ ದೋಸೆ ಉಪ್ಪಿಟ್ಟು ರೆಸಿಪಿ

ಬೆಳಿಗ್ಗೆ ತಿಂಡಿಗೆ ಮಾಡಿಕೊಂಡ ದೋಸೆ ಹೆಚ್ಚಾದರೆ ಏನು ಮಡುವುದು ಎಂಬ ಚಿಂತೆಯಾಗುತ್ತದೆ. ದೋಸೆ ಹೆಚ್ಚಾದರೆ ಚಿಂತಿಸುವುದು ಬೇಡ. ದೋಸೆಯಿಂದ ರುಚಿಯಾದ ದೋಸೆ ಉಪ್ಪಿಟ್ಟು ತಯಾರಿಸಬಹುದು. ಉಪ್ಪಿಟ್ಟನ್ನು ಮದ್ಯಾಹ್ನ ಟೀ ಜೊತೆಗೂ ಸೇವಿಸಬಹುದು. ದೋಸೆ ಉಪ್ಪಿಟ್ಟು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ ಓದಿ.

ಬೇಕಾಗು ಪದಾರ್ಥಗಳು:
ದೋಸೆ
ಈರುಳ್ಳಿ
ಟೊಮಾಟೊ
ಹಸಿ ಮೆಣಸು
ಅರಿಶಿಣ
ಕರಿ ಬೇವು
ಲಿಂಬು
ಎಣ್ಣೆ
ಸಾಸಿವೆ
ಇಂಗು
ಕೊತುಂಬರಿ ಸೊಪ್ಪು
ಉಪ್ಪು
ಸಕ್ಕರೆ

ಮಾಡುವ ವಿಧಾನ:
ದೋಸೆ ಎರೆದಿಟ್ಟುಕೊಂಡು ಕನಿಷ್ಟ ಮೂರು ತಾಸಾದರೂ ಆಗಿರಬೇಕು. ನಂತರ ದೋಸೆಯನ್ನು ಒಮ್ಮೆ ನೀರಿನಲ್ಲಿ ಅದ್ದಿ ನಂತರ ದೋಸೆ ಹಿಂಡಿ ನೀರನ್ನು ತೆಗೆದುಕೊಳ್ಳಬೇಕು. ದೋಸೆ ಪುಡಿ ಪುಡಿ ಆಗುತ್ತದೆ. ನಂತರ ಅದಕ್ಕೆ ಒಗ್ಗರಣೆ ಹಾಕಬೇಕು. ಮೊದಲಿಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ, ಟೊಮಾಟೊ, ಸಾಸಿವೆ, ಹಸಿ ಮೆಣಸು, ಬೇವಿನ ಸೊಪ್ಪು, ಅರಿಶಿಣ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಪುಡಿ ಮಾಡಿಕೊಂಡ ದೋಸೆಯನ್ನು ಹಾಕಿ ಕಲಸಬೇಕು. ಆಮೇಲೆ ಕುತುಂಬರಿ ಸೊಪ್ಪು, ಉಪ್ಪು, ಸಕ್ಕರೆ, ಲಿಂಬು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು. ರುಚಿಯಾದ ದೋಸೆ ಉಪ್ಪಿಟ್ಟು ರೆಡಿ. ಇದನ್ನು ಬೆಳ್ಳಿಗ್ಗೆ ತಿಂಡಿಯಾಗಿಯೂ ಸೇವಿಸಬಹುದು. ಮದ್ಯಾಹ್ನ ಟೀ ಜೊತೆಯೂ ಸೇವಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss