ಹೊಸದಿಗಂತ ಆನ್ ಲೈನ್ ಡೆಸ್ಕ್:
ಮಾನಸಿಕ ಅಸ್ವಸ್ಥ ಮಗ ಮಾರಕಾಸ್ತ್ರದಿಂದ ತಂದೆಯನ್ನೆ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಟುಟಿಕೊರಿನ್ ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಮಾಡಿರುವ ಆರೋಪಿ ಪುರುಷೋತ್ತಮ್ (23), ಮೃತಪಟ್ಟ ವ್ಯಕ್ತಿ ಮೋಹನ್ ರಾಜ್(73). ಮೋಹನ್ ರಾಜ್ ಮೊದಲ ಹೆಂಡತಿಯಿಂದ ದೂರವಾದ ನಂತರ ಆನಂದಿ ಎಂಬುವವರನ್ನು ಮದುವೆಯಾಗಿದ್ದು, ಈ ದಂಪತಿಗೆ ಹುಟ್ಟಿದ ಮಗ ಪುರುಷೋತ್ತಮ್ ಮಾನಸಿಕ ಅಸ್ವಸ್ಥನಾಗಿದ್ದ.
ಪುರುಷೋತ್ತಮ್’ಗೆ ತಂದೆ ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದಾಗ ಅವನು ಮಾತ್ರೆ ತೆಗೆದುಕೊಳ್ಳಲು ನಿರಾಕರಿಸಿದ್ದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಪುರುಷೋತ್ತಮ್ ಮಾರಕಾಸ್ತ್ರದಿಂದ ತಂದೆಯ ತಲೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.