ಹೊಸದಿಗಂತ ಆನ್ ಲೈನ್ ಡೆಸ್ಕ್:
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ 140 ದಿನಗಳ ಕಾಲ ಜೈಲಿನಲ್ಲಿರುವ ನಟಿ ರಾಗಿಣಿ ಇಂದು ಸಂಜೆ ಬಿಡುಗಡೆಯಾಗಿಲ್ಲಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಎನ್ ಡಿ ಪಿಎಸ್ ಕೋರ್ಟ್ ಗೆ ನಟಿ ರಾಗಿಣಿ ಪರ ವಕೀಲರು ತಲುಪಿಸಿದ್ದರು. ಅಲ್ಲದೇ ಇಬ್ಬರ ಶ್ಯೂರಿಟಿ ಹಾಗೂ 3 ಲಕ್ಷ ಬಾಂಡ್ ಅನ್ನು ಕೋರ್ಟ್ ಗೆ ಸಲ್ಲಿಸಿದ್ದರು. ಆದರೆ ಸುಪ್ರೀಂ ನೀಡಿದ ಷರತ್ತು ಪೂರೈಸಲು ಆಪ್ತ ಶ್ಯೂರಿಟಿ ಇಲ್ಲದೆ ಮೂರು ದಿನ ಮತ್ತೆ ತುಪ್ಪದ ಬೆಡಗಿ ಜೈಲಿನಲ್ಲಿ ಇರಬೇಕಾಯಿತು.
ಜಾಮೀನಿಗೆ ಅಗತ್ಯ ಷರತ್ತು ಪೂರೈಸಿ ಇಂದು ಸಂಜೆ ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.