ಮಡಿಕೇರಿ: ಲಯನ್ಸ್ ಕ್ಲಬ್ ನಿರ್ದೇಶಕರೊಬ್ಬರು ಸೇರಿದಂತೆ ಇಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಮಾದಾಪುರದಲ್ಲಿ ನಡೆದಿದೆ.
ಮೃತರನ್ನು ಮಡಿಕೇರಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಮತ್ತು ಲಯನ್ಸ್ ಕ್ಲಬ್ ಟ್ರಸ್ಟ್ ಖಜಾಂಚಿ ಬಾಚಿನಾಡಂಡ ನಂಜಪ್ಪ ಹಾಗೂ ಅವರ ಅಣ್ಣನ ಹತ್ತು ವರ್ಷದ ಪುತ್ರ ಎಂದು ಗುರುತಿಸಲಾಗಿದೆ. ಮಾದಾಪುರ ಹೊಳೆಯಲ್ಲಿ ಈ ಇಬ್ಬರು ಈಜುತ್ತಿದ್ದ ಸಂದರ್ಭ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗೆಳೆಯನ ಅಗಲಿಕೆಗೆ ಮಡಿಕೇರಿ ಲಯನ್ಸ್ ಸದಸ್ಯರು ಕಂಬನಿ ಮಿಡಿದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹಗಳನ್ನು ಹೊರಕ್ಕೆ ತೆಗೆದು ಮುಂದಿನ ಕ್ರಮ ಜರುಗಿಸಿದ್ದಾರೆ.