Thursday, August 11, 2022

Latest Posts

ಮಾಧನಭಾವಿ ಗ್ರಾಮದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ: ಮೊತ್ತೋರ್ವ ಆರೋಪಿ ಬಂಧನ

ಧಾರವಾಡ: ತಾಲೂಕಿನ ಮಾಧನಭಾವಿ ಗ್ರಾಮದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಗೆ ವಿಷ ಉಣಿಸಿ ಪರಾರಿಯದ ಅದೇ ಗ್ರಾಮದ ಸಮೀರ್ ಮುಲ್ಲಾನವರ ಎಂಬ ಆರೋಪಿ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಮೇ.೨೧ರoದು ಬಾಲಕಿ ಮೇಲೆ ಮಾಧನಭಾವಿ ಗ್ರಾಮದ ಬಸವರಾಜ ಕೆರಾಳೆ ಹಾಗೂ ಸಮೀರ್ ಮುಲ್ಲಾನವರ ಎಂಬುವವರು ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಕೊಲೆ ಮಾಡಿದ್ದರು.
ಈ ಸಂಬoಧ ಗರಗ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆದರೆ, ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಬೋಗೂರು ಗ್ರಾಮದಲ್ಲಿ ನಡೆದ ಘಟನೆ ನಂತರ ಈ ಘಟನೆ ಬೆಳಕಿಗೆ ಬಂದು ಸಾಕಷ್ಟು ಸುದ್ದಿಯಾಗಿತ್ತು.
ಘಟನೆ ಸಂಬoಧ ಕೇವಲ ಬಸವರಾಜ ಕೆರಾಳೆ ಮಾತ್ರ ಬಂಧಿಸಿತ್ತು. ಈ ವಿಷಯ ಸಾಕಷ್ಟು ಚರ್ಚೆಯಾಗಿತ್ತು. ಸ್ವತಃ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಪ್ರಮಿಳಾ ಅವರೇ ಮಾಧನಭಾವಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
ಈ ಘಟನೆ ನಡೆದು ಮೂರು ತಿಂಗಳಾಗಿದ್ದರೂ ಇನ್ನೋರ್ವ ಆರೋಪಿ ಸಮೀರ್ ಮುಲ್ಲಾನವರನನ್ನು ಬಂಧಿಸಿರಲಿಲ್ಲ. ಯಾವಾಗ ಈ ಘಟನೆ ಕಾವು ಪಡೆದುಕೊಂಡಿತೋ ಇದೀಗ ಸಮೀರ್ ನನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss