ಮಳವಳ್ಳಿ: ಜನರ ಮನಸ್ಸನ್ನು ಶುದ್ಧಗೊಳಿಸುವ ಕೆಲಸವನ್ನು ಮಾಧ್ಯಮದವರು ಮಾಡಬೇಕು ಎಂದು ಮಳವಳ್ಳಿಯ ಶ್ರೀ ರಾಮರೂಢ ಮಠದ ಶ್ರೀ ಬಸವಾನಂದ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಶ್ರೀರಾಮ ಮಂದಿರ ಆವರಣದಲ್ಲಿ ಮಳವಳ್ಳಿ ಸಿಡಿ ಹಬ್ಬದ ಅಂಗವಾಗಿ ಹೊರತಂದಿರುವ ಹೊಸದಿಗಂತ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಮಾಧ್ಯಮಗಳು ಸಮಾಜದಲ್ಲಿ ಕನ್ನಡಿ ಇದ್ದಂತೆ. ಮನುಷ್ಯರು ಕನ್ನಡಿಯನ್ನು ಹೇಗೆ ನೋಡಿಕೊಳ್ಳುತ್ತಾರೋ ಹಾಗೆ ಸಮಾಜದಲ್ಲಿ ಎಲ್ಲವನ್ನೂ ಕನ್ನಡಿಯ ರೀತಿಯಲ್ಲಿ ಮಾಧ್ಯಮದವರು ತೋರಿಸುತ್ತಾರೆ ಎಂದರು.
ಖಡ್ಗಕ್ಕಿಂತ ಲೇಖನಿ ಹರಿತ ಎಂಬಂತೆ ಖಡ್ಗ ವ್ಯಕ್ತಿಯನ್ನು ಕೊಂದರೆ, ಇಡೀ ಸಮಾಜವನ್ನೇ ಸರ್ವನಾಶ ಮಾಡುವಂತಹ ಶಕ್ತಿ ಲೇಖನಿಗಿರುತ್ತದೆ. ಲೇಕನಿಯಿಂದ ಯಾರನ್ನಾದರೂ ಬಹು ಎತ್ತರಕ್ಕೆ ಕೊಂಡೊಯ್ಯಬಹುದು, ಇಲ್ಲವೇ ಅಷ್ಟೇ ಪ್ರಮಾಣದಲ್ಲಿ ಹಾನಿಯನ್ನೂ ಮಾಡಬಹುದು ಎಂದು ಉದಾಹರಣೆ ಸಮೇತ ವಿವರಿಸಿದರು.
ಸಿಡಿ ಹಬ್ಬವನ್ನು ಸರ್ವ ಜನಾಂಗದವರೂ ಕೂಡಿ ಆಚರಿಸುತ್ತಿರುವು ಶ್ಲಾಘನೀಯ. ಇದರೊಂದಿಗೆ ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಿಸುವ ಮೂಲಕ ತಾವೂ ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಗ ಶಿಬಿರದಲ್ಲಿ ಪುರವಣಿ ಬಿಡುಗಡೆ
ಇದಕ್ಕು ಮುನ್ನ ಪಟ್ಟಣದ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆಯುತ್ತಿದ್ದ ಯೋಗ ಶಿಬಿರದಲ್ಲಿ ವಿಶೀಷ ಪುರವಣಿ ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ದೊಡ್ಡಣ್ಣ ಇಂತಹ ಸಂಪ್ರದಾಯಬದ್ದ ಆಚರಣೆಗಳ ಸಂದರ್ಭದಲ್ಲಿ ಪತ್ರಿಕೆ ಹೊರತಂದಿರುವುದು ಶ್ಲಾಘನೀಯ ಎಂದರು. ಪತಂಜಲಿ ಯೋಗ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಿದ್ಯಾ ವಿಕಾಸ ಶಾಲೆ ವ್ಯವಸ್ಥಾಪ ಕ ಬಿ.ಎಂ. ಮಹದೇವಪ್ಪ, ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎಚ್. ಕೆಂಪಯ್ಯ, ಎಸ್ ಕೆಡಿಆರ್ ಡಿಪಿ ಯೋಜನಾಧಿಕಾರಿ ಲೀಲಾವತಿ, ಶ್ರೀಧರ್ ನರ್ಸಿಂಗ್ ಹೋಂ ನ ಡಾ.ಶ್ರೀಧರ್, ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ವಿ.ಪ್ರಕಾಶ್, ಪುರ ಸಭಾ ಸದಸ್ಯ ಕೃಷ್ಣ, ಹೊಸದಿಗಂತ ಪತ್ರಿಕೆ ಜಾಹಿರಾತು ವ್ಯವಸ್ಥಾಪಕ ರವಿ, ಎಂ.ಶಿವಕುಮಾರ್ ಇತರರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಪಟ್ಟಲದಮ್ಮ ದೇವಾಲಯ ಆವರಣದಲ್ಲಿ ಅರ್ಚಕರಾದ ಸತೀಶ್ ಪೂಜೆ ಸಲ್ಲಿದಿ ಯಜಮಾನರ ಸಮ್ಮುಖದಲ್ಲಿ ಪತ್ರಿಕೆ ಬಿಡುಗೊಡೆ ಮಾಡಲಾಯಿತು. ವಿವಿಧ ಸಂಘ-ಸಂಸ್ಥೆಗಳಲ್ಲಿ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಲಾಯಿತು.