ಹೊಸದಿಲ್ಲಿ:ಅಮ್ನೆಸ್ಟಿ ಇಂಟರ್ನ್ಯಾಷನಲ್ಗೆ ಭಾರತದಲ್ಲಿ ಮಾನವೀಯ ಕೆಲಸಗಳಲ್ಲಿ ತೊಡಗಲು ಸರಕಾರ ಮುಕ್ತ ಅವಕಾಶ ನೀಡುತ್ತದೆ. ಆದರೆ ದೇಶದ ಕಾನೂನಿನಲ್ಲಿ ಮೂಗು ತೂರಿಸಲು ಅಥವಾ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪಿಸಲು ಮಾತ್ರ ಅದಕ್ಕೆ ಅವಕಾಶವಿಲ್ಲ ಎಂದು ಒತ್ತಿ ಹೇಳಿರುವ ಕೇಂದ್ರ ಗೃಹಸಚಿವಾಲಯವು, ಸರಕಾರ ತನ್ನ ವಿರುದ್ಧ ನಿರಂತರ ವಿನಾಕಾರಣ ನಿಲುವು ತಳೆದಿದೆ ಎಂಬ ಅಮ್ನೆಸ್ಟಿಯ ಹೇಳಿಕೆ ವಿಷಾದನೀಯ ಎಂಬುದಾಗಿ ತಿಳಿಸಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿದೇಶಿ ದೇಣಿಗೆ (ನಿಯಂತ್ರಣ)ಕಾಯ್ದೆ(ಎಫ್ಸಿಆರ್ಎ)ಯಡಿ ಕೇವಲ ಒಂದು ಬಾರಿ ನಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಕೂಡಾ ಇದು ೨೦ವರ್ಷಗಳ ಹಿಂದೆ (೨೦೦೦ ಡಿಸೆಂಬರ್ ೧೯). ಆದರೆ ಅಂದಿನಿಂದ ಅಮ್ನೆಸ್ಟಿ ಇಂಟರ್ನ್ಯಾಷನಲ್ ನಿರಂತರ ಅರ್ಜಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ, ಈ ಹಿಂದಿನ ಸರಕಾರಗಳು ಅಮ್ನೆಸ್ಟಿ ಅದಕ್ಕೆ ಅರ್ಹವಲ್ಲವೆಂಬ ಕಾರಣಕ್ಕೆ ಅಂತಹ ಅರ್ಜಿಗಳನ್ನು ತಿರಸ್ಕರಿಸುತ್ತಲೇ ಬಂದಿರುವುದನ್ನು ಕೇಂದ್ರ ಗೃಹಸಚಿವಾಲಯ ದಾಖಲೆ ಸಮೇತ ಮುಂದಿಟ್ಟಿದೆ.
ಅಮ್ನೆಸ್ಟಿ ಯುಕೆಯು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸೇರಿದಂತೆ ವಿವಿಧ ಸಂಘಟನೆಗಳಿಗೆ ಎಫ್ಸಿಆರ್ಎಯಡಿ ಕೇಂದ್ರ ಗೃಹಖಾತೆಯ ಯಾವುದೇ ಅನುಮತಿ ಇಲ್ಲದೆ ಭಾರೀ ಪ್ರಮಾಣದ ನಿಗಳನ್ನು ನೀಡುತ್ತಲೇ ಬಂದಿದೆ.ಆದರೆ ಅಮ್ನೆಸ್ಟಿ ಮತ್ತಿತರ ಸಂಘಟನೆಗಳು ಇದನ್ನು ದುರ್ಬಳಕೆ ಮಾಡಿಕೊಂಡಿರುವುದು ಮತ್ತು ಅಮ್ನೆಸ್ಟಿಯ ಅಕ್ರಮ ಚಟುವಟಿಕೆಗಳನ್ನು ಗಮನಿಸಿದ ಬಳಿಕ ಹಿಂದಿನ ಸರಕಾರಗಳು ಕೂಡಾ ಈ ರೀತಿ ನಿ ಸ್ವೀಕರಿಸುವುದನ್ನು ತಿರಸ್ಕರಿಸಿದ್ದನ್ನು ಅದು ಬೊಟ್ಟು ಮಾಡಿದೆ.
ಮಾನವೀಯ ಸೇವೆ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಅಮ್ನೆಸ್ಟಿ ಕೇವಲ ಅಂತಹ ಚಟುವಟಿಕೆಗೆ ಮಾತ್ರ ಸೀಮಿತವಾಗಿರದೆ ದೇಶದ ರಾಜಕೀಯ ಮತ್ತು ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪಿಸುತ್ತಿರುವ ಬಗ್ಗೆ ಈ ಹಿಂದಿನಿಂದಲೂ ಗಂಭೀರ ಆರೋಪಗಳು ಕೇಳಿಬರುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.