Wednesday, August 10, 2022

Latest Posts

ಮಾನವ ಹಕ್ಕು ಆಯೋಗದ ತೀರ್ಪಿನ ವಿರುದ್ಧ ಹೋರಾಟಕ್ಕೆ ಕಾಸರಗೋಡು ಕನ್ನಡಿಗರ ನಿರ್ಧಾರ

ಕಾಸರಗೋಡು: ಆಯಾ ರಾಜ್ಯಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕಾದದು ಅಗತ್ಯವಾಗಿದ್ದರೂ ಸಂವಿಧಾನವು ವಿಶೇಷವಾಗಿ ಮಾನ್ಯತೆ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಮಾನವ ಹಕ್ಕು ಆಯೋಗವು ಕೊಟ್ಟಿರುವ ತೀರ್ಪನ್ನು ಖಂಡಿಸಿ ಗಡಿನಾಡ ಕನ್ನಡಿಗರ ಸಂವಿಧಾನ ಬದ್ಧ ಹಕ್ಕು ರಕ್ಷಣೆಗೆ ಸಂಬಂಧಿಸಿ ಕಾನೂನು ಪಾಲಿಸುವಂತೆ ಆಗ್ರಹಿಸಲು ಸಂಬಂಧಪಟ್ಟವರನ್ನು ಒತ್ತಾಯಿಸಲಾಗಿದೆ.
ಮಂಜೇಶ್ವರ ಸಮೀಪದ ಮೂಡಂಬೈಲು ಸರಕಾರಿ ಶಾಲೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘ, ಶಿಕ್ಷಕ ವೃಂದ ಹಾಗೂ ಕಾಸರಗೋಡು ಕನ್ನಡ ಹೋರಾಟ ಸಮಿತಿ ಇವುಗಳ ನೇತೃತ್ವದಲ್ಲಿ ನಡೆದ ಕಾಸರಗೋಡಿನ ಕನ್ನಡಿಗರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಜೋನ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಕೆ.ಆರ್., ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಉಪಸ್ಥಿತರಿದ್ದರು.
ಮಾನವ ಹಕ್ಕು ಆಯೋಗವು ಹೊರಡಿಸಿರುವ ಆದೇಶದ ವಿರುದ್ಧ ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಸಹಿತ ಸಂಬಂಧಪಟ್ಟವರ ಮೂಲಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಯಾವುದೇ ಕಾರಣಕ್ಕೂ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಬೋಧನೆಗೆ ಕನ್ನಡ ಬಾರದ ಇತರ ಭಾಷೆಗಳ ಶಿಕ್ಷಕರನ್ನು ನೇಮಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ನಿರ್ಣಯ ಕೈಗೊಂಡಿತು. ರಕ್ಷಕ ಶಿಕ್ಷಕ ಸಂಘ, ಮಾತೃ ಸಮಿತಿ ಹಾಗೂ ಶಿಕ್ಷಕ ವೃಂದದ ನೇತೃತ್ವದಲ್ಲಿ ಸಂಬಂಧಪಟ್ಟವರಿಗೆ ಮನವಿ ನೀಡಲು ತೀರ್ಮಾನಿಸಲಾಗಿದೆ. ಶಾಲಾ ಮಾತೃ ಸಮಿತಿಯ ಅಧ್ಯಕ್ಷೆ ಅನುಪಮಾ, ಬೀಫಾತಿಮಾ, ಯಶೋಧಾ, ಸಬೀನಾ, ಪ್ರತಿಭಾ ಎಂ., ಲತೀಫ್, ಶಿಕ್ಷಕಿ ದಯಾವತಿ ಸಾಲ್ಯಾನ್ ಮಾತನಾಡಿದರು. ಸುಕೇಶ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss