ಹೊಸದಿಗಂತ ಆನ್ಲೈನ್ ಡೆಸ್ಕ್:
ತನ್ನ ಕೊನೆಯಾಸೆಯನ್ನು ನೆರವೇರಿಸುವಂತೆ ಕೋರಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಕೃಷ್ಣ(25 ) ಆತ್ಮಹತ್ಯೆಗೆ ಶರಣಾದ ಯುವಕ.
ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ನಿನ್ನೆ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿ ಒಬ್ಬನೇ ಇದ್ದ. ಈ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಬರೆದ ಡೆತ್ನೋಟ್ ಸಿಕ್ಕಿದ್ದು, ತನ್ನ ಕೊನೆಯಾಸೆ ಬಗ್ಗೆ ಬರೆದಿದ್ದಾರೆ.
ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ. ನಾನು ಎಲ್ಲರಿಗೂ ನೋವು ಕೊಟ್ಟಿದ್ದೇನೆ. ಒಳ್ಳೆಯ ಮಗನಾಗಲಿಲ್ಲ. ಒಳ್ಳೆಯ ತಮ್ಮ,ಸ್ನೇಹಿತನೂ ಆಗಲಿಲ್ಲ. ನನ್ನ ಹುಡುಗಿಗೂ ಒಳ್ಳೆಯ ಸಂಗಾತಿಯಾಗಲಿಲ್ಲ. ನಿಮ್ಮಿಂದ ದೂರಾಗುತ್ತಿರುವುದು ನನ್ನ ಇಚ್ಛೆ ಇದಕ್ಕೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ನನಗೆ ಎರಡು ಕೊನೆಯಾಸೆ ಇದೆ. ನನ್ನ ಅಂತ್ಯಕ್ರಿಯೆಯಲ್ಲಿ ಯಶ್ ಅಣ್ಣ ಹಾಗೂ ಸಿದ್ದರಾಮಯ್ಯ ಸರ್ ಭಾಗಿಯಾಗಬೇಕು. ಇವರಿಬ್ಬರ ಪಕ್ಕಾ ಅಭಿಮಾನಿ ನಾನು. ನನ್ನ ಕಡೆ ಆಸೆಯನ್ನು ಈಡೇರಿಸಿ ಎಂದು ಬರೆದಿದ್ದಾರೆ. ಈ ಸುದ್ದಿ ಸಿದ್ದರಾಮಯ್ಯ ಅವರಿಗೆ ತಲುಪಿದ್ದು, ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ.