Sunday, July 3, 2022

Latest Posts

ಮಾರಕಾಯುಧದಿಂದ ಹಲ್ಲೆ ನಡೆಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಮಂಗಳೂರು:

ನಗರದ ಲಾಲ್‌ಭಾಗ್ ಪಬ್ಬಾಸ್ ಬಳಿ ಫೆ.7ರ ರಾತ್ರಿ ತಂಡವೊಂದು ಯುವಕನೊಬ್ಬನಿಗೆ ಮಾರಕಾಯುಧದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಫಾಯಿಕ್ (18) ಮೊಹಮ್ಮದ್ ಶಾಹಿಲ್ (19) ಹಾಗೂ ಇನ್ನೋರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.7ರಂದು ರಾತ್ರಿ 9.20ರ ಸುಮಾರಿಗೆ ದೀಪಕ್ ಕುಮಾರ್ ಎಂಬವರಿಗೆ ಲಾಲ್ ಬಾಗ್ ಬಳಿ ಮೂರು ಜನ ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಎಡಗೈಯ ಮುಂಗೈಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss