Sunday, July 3, 2022

Latest Posts

ಮಾರ್ಕೆಟ್ ಗೆ ಬಂದವರಿಗೆ ಮಾಸ್ಕ್ ಕೊಟ್ಟು ಶುಭ ಕೋರಿದ ಬಿಜೆಪಿ ಮಹಿಳೆಯರು

ಶಿವಮೊಗ್ಗ: ಇಲ್ಲಿನ ನಗರ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಗುರುವಾರ ‌ವಿಶೇಷ ಕಾರ್ಯಕ್ರಮ ನಡೆಸಿದರು.
ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದ ಮಹಿಳೆಯರಿಗೆ ಶಿವಪ್ಪ ನಾಯಕ ಪ್ರತಿಮೆ ಬಳಿ ಮಾಸ್ಕ್ ನೀಡಿ ಶುಭ ಕೋರಿದರು. ಅಷ್ಟೇ ಅಲ್ಲ, ಸಂಪ್ರದಾಯದ ಪ್ರಕಾರ ಹೂ, ಅರಿಸಿಣ, ಕುಂಕುಮವನ್ನೂ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆ ಉಪಮೇಯರ್ ಸುರೇಖಾ ಮುರುಳೀಧರ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಬಾಗಿನ ನೀಡುವುದಕ್ಕೆ ಬಹಳ ಮಹತ್ವ ಇದೆ. ಅದನ್ನೇ ನಾವು ಮಾಡಿದ್ದೇವೆ. ಇನ್ನು ಕೊರೋನಾ ಹೆಚ್ಚುತ್ತಿರುವುದರಿಂದ ಜಾಗೃತಿ ಮೂಡಿಸಲು ಮಾಸ್ಕ್ ವಿತರಿಸಿದ್ದೇವೆ. ಸುಮಾರು ಒಂದು ಸಾವಿರ ಮಾಸ್ಕ್ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ಮೇಯರ್ ಸುವರ್ಣ ಶಂಕರ್, ರಶ್ಮಿ, ಆರತಿ, ಶೋಭಾ, ಪ್ರತಿಮಾ, ಚನ್ನಬಸಪ್ಪ, ಜ್ಞಾನೇಶ್ವರ, ಜಗದೀಶ್ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss