Tuesday, July 5, 2022

Latest Posts

ಮಾರ್ಗನ್ ಅರ್ಧಶತಕ: ರಾಜಸ್ಥಾನ ತಂಡದ ಗೆಲುವಿಗೆ 192 ರನ್​ಗಳ ಬೃಹತ್ ಟಾರ್ಗೆಟ್

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವು ರಾಜಸ್ಥಾನ ತಂಡದ ಗೆಲುವಿಗೆ 192 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್​ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ನೈಟ್​ ರೈಡರ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 191 ರನ್​ಗಳಿಸಿದೆ.
ಕೆಕೆಆರ್​ ಬ್ಯಾಟಿಂಗ್​ ಇಳಿದ ಮೊದಲ ಓವರ್​ನಲ್ಲೇ ನಿತೀಶ್​ ರಾಣಾ ವಿಕೆಟ್ ಕಳೆದುಕೊಂಡಿತು.ಬಳಿಕ ಗಿಲ್ ಮತ್ತು ತ್ರಿಪಾಠಿ 2ನೇ ವಿಕೆಟ್​ಗೆ 72 ರನ್​ಗಳ ಜೊತೆಯಾಟ ನೀಡಿದರು. ಗಿಲ್ 36, ತ್ರಿಪಾಠಿ 39 ರನ್​ಗಳಿಸಿ ಅದ್ಭುತ ಆರಂಭ ಒದಗಿಸಿಕೊಟ್ಟರು. ನಂತರ ಬಂದ ನರೈನ್ ಹಾಗೂ ಕಾರ್ತಿಕ್​ ಸೊನ್ನೆಗೆ ಪೆವಿಲಿಯನ್​ ಗೆ ಹೆಜ್ಜೆಯಿಟ್ಟರು.
ಆದರೆ ತಂಡಕ್ಕೆ ಮರಳಿರುವ ರಸೆಲ್​ 25 ರನ್​ ಗಳಿಸಿದರೆ , . ನಾಯಕನ ಆಟವಾಡಿದ ಇಯಾನ್ ಮಾರ್ಗನ್​ 68 ರನ್​ಗಳಿಸಿ ಔಟಾಗದೆ ಉಳಿದರು. ಕಮ್ಮಿನ್ಸ್​ 15 ರನ್​ಗಳಿಸಿದರು. ಒಟ್ಟಾರೆ 20 ಓವರ್​ಗಳಲ್ಲಿ ಕೋಲ್ಕತ್ತಾ 7 ವಿಕೆಟ್ ಕಳೆದುಕೊಂಡು 191 ರನ್​ಗಳಿಸಿದೆ.
ಆರ್​ಆರ್ ಪರ ರಾಹುಲ್ ತೆವಾಟಿಯಾ 25ಕ್ಕೆ 3, ಕಾರ್ತಿಕ್ ತ್ಯಾಗಿ 36ಕ್ಕೆ 2 ಆರ್ಚರ್​ 19 ರನ್​ ನೀಡಿ 1 ವಿಕೆಟ್​ ಹಾಗೂ ಗೋಪಾಲ್​ 44ಕ್ಕೆ 1 ವಿಕೆಟ್ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss