Thursday, August 18, 2022

Latest Posts

ಮಾರ್ಗ ಬದಲಾವಣೆ ಇಫೆಕ್ಟ್: ಮಂಗಳೂರಲ್ಲಿ ಶುರುವಾಯ್ತು ಟ್ರಾಫಿಕ್ ಜಾಮ್ ಪ್ರಾಬ್ಲೆಮ್!!

ಹೊಸದಿಗಂತ ವರದಿ ಮಂಗಳೂರು:

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಹಿನ್ನೆಲೆಯಲ್ಲಿ ಹಂಪನಕಟ್ಟೆ ವೃತ್ತದಿಂದ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ಬಾವುಟಗುಡ್ಡೆವರೆಗೆ ವಾಹನ ಸಂಚಾರ ನಿಷೇಧಿಸಿರುವುದರಿಂದ ನಗರದ ರಸ್ತೆಗಳಲ್ಲಿ ಸೋಮವಾರ ಬೆಳಗ್ಗಿನಿಂದ ಭಾರಿ ವಾಹನ ದಟ್ಟಣೆ ಉಂಟಾಗಿದೆ.

ನಗರದ ತೀವ್ರ ಜನ ಹಾಗೂ ವಾಹನ ದಟ್ಟಣೆಯ ಪ್ರದೇಶವಾದ ಹಂಪನಕಟ್ಟೆ ಸುತ್ತಲಿನ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಭಂದ ಹಾಗೂ ಏಕಮುಖ ಸಂಚಾರ ಅದೇಶದಿಂದ ನಗರದಲ್ಲಿ ವಾಹನ, ಜನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಂಪನಕಟ್ಟೆ ಕಡೆಯಿಂದ ಬಾವುಟಗುಡ್ಡೆ, ಫಳ್ನೀರ್ ಕಡೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಫಳ್ನೀರ್, ಬಾವುಟಗುಡ್ಡೆ, ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್ ಕಡೆಗೆ ತೆರಳುವ ವಾಹನಗಳು ಕೆ.ಎಸ್ . ರಾವ್ ರಸ್ತೆ- ನವಭಾರತ ವೃತ್ತ ಪಿವಿಎಸ್ – ಬಂಟ್ಸ್ ಹಾಸ್ಟೆಲ್ ಮೂಲಕ ತೆರಳುತ್ತಿವೆ. ಇದರಿಂದಾಗಿ ಈ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ನವಭಾರತ ವೃತ್ತ ದಿಂದ ಕೆ.ಎಸ್. ರಾವ್ ರಸ್ತೆಗೆ ವಾಹನ ಸಂಚಾರ ನಿಷೇಧ ಗೊಳಿಸಿದ್ದರೂ, ಕಾರು ಮತ್ತು ದ್ವಿಚಕ್ರ ವಾಹನ ಗಳು ಇಲ್ಲಿ ನುಗ್ಗುತ್ತಿವೆ. ಬೆರಳೆಣಿಕೆಯಷ್ಟು ಇರುವ ಸಂಚಾರಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲಾಗದೆ ಹೈರಾಣಾಗಿದ್ದಾರೆ. ಸ್ಟೇಟ್ ಬ್ಯಾಂಕ್ ನಿಂದ ಪಿವಿಎಸ್ ಗೆ ತೆರಳಲು ಈಗ ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಿದೆ. ಇನ್ನೊಂದೆಡೆ ರೈಲ್ವೆ ಸ್ಟೇಷನ್ ರಸ್ತೆಯಲ್ಲೂ ವಾನಹ ದಟ್ಟಣೆ ಉಂಟಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!