ಹೊಸದಿಗಂತ ಆನ್ಲೈನ್ ಡೆಸ್ಕ್:
ಭಾರತಕ್ಕೆ ಈವರೆಗೂ 11 ರಫೇಲ್ ಯುದ್ಧ ವಿಮಾನಗಳು ಆಗಮಿಸಿದ್ದು, ಮಾರ್ಚ್ ವೇಳೆಗೆ ಈ ಸಂಖ್ಯೆ 17 ಕ್ಕೆ ಏರಿಕೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ಅವಧಿ ವೇಳೆ ಮಾತನಾಡಿ, ಈಗಾಗಲೇ ದೇಶಕ್ಕೆ 11 ರಫೇಲ್ ಯುದ್ಧ ವಿಮಾನಗಳು ಬಂದಿದ್ದು, ಮಾರ್ಚ್ನಲ್ಲಿ ಈ ಸಂಖ್ಯೆ 17 ಕ್ಕೆ ಏರಿಕೆಯಾಗಲಿದೆ.
ಸಂಪೂರ್ಣ ರಫೇಲ್ ಜೆಟ್ಗಳು 2022 ಏಪ್ರಿಲ್ಒಳಗಾಗಿ ಭಾರತ ತಲುಪಲಿವೆ. ಯುದ್ಧ ವಿಮಾನ ಆಗಮನದ ವಿಚಾರದಲ್ಲಿ ಆಲಸ್ಯ ತೋರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.