Tuesday, June 28, 2022

Latest Posts

ಬೆಂಗಳೂರಿನಲ್ಲಿ ಮಾ.15 ರಿಂದ ಮೂರು ದಿನ ಆರ್.ಎಸ್.ಎಸ್ ಅಧಿವೇಶನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಅಧಿವೇಶನ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾ.15 ರಿಂದ 17 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಈ ಅಧಿವೇಶನವು ಮಾಗಡಿ ರಸ್ತೆಯಲ್ಲಿರುವ ಜನಸೇವಾ ವಿದ್ಯಾಕೇಂದ್ರದ ಪರಿಸರದಲ್ಲಿ ನಡೆಯಲಿದ್ದು, ಈ ರೀತಿಯ ವಾರ್ಷಿಕ ಸಭಾ ಅಧಿವೇಶನವು ಆರೆಸ್ಸೆಸ್ ನ ವಾರ್ಷಿಕ ಕಾರ್ಯಕ್ರಮವಾಗಿದ್ದು, ಈ ಸಭೆಯಲ್ಲಿ ಆರೆಸೆಸ್ಸ್ ನ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷದ್, ವನವಾಸಿ ಕಲ್ಯಾಣ ಆಶ್ರಮ, ವಿದ್ಯಾರ್ಥಿ ಪರಿಷತ್, ಕಿಸಾನ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಮೊದಲಾದ 35ಕ್ಕೂ ಹೆಚ್ಚು ಸಂಘಟನೆಗಳಿಂದ 1400 ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ (ಭಯ್ಯಾ) ಜೋಷಿ ಸಭೆಯ ಕಲಾಪವಗಳನ್ನು ನಡೆಸುತ್ತಾರೆ. ಈ ಸಭೆಯಲ್ಲಿ ಆರೆಸ್ಸೆಸ್ ಹಾಗೂ ವಾರ್ಷಿಕ ವರದಿ, ಸಂಘದ ವಿಸ್ತಾರ, ಹೊಸ ಆಯಾಮಗಳು, ಕಾರ್ಯಕ್ರಮಗಳು ಮುಂಬರುವ ವರ್ಷದ ಯೋಜನೆ ಇತ್ಯಾದಿಗಳು ಚರ್ಚೆಯಾಗಲಿದೆ. ಜೊತೆಗೆ ಈ ಸಭೆಯು ರಾಷ್ಟ್ರದ ಮಹತ್ವದ ವಿಷಯಗಳ ಕುರಿತಾಗಿ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss