ಕಾಸರಗೋಡು: ವಿದೇಶಗಳಲ್ಲಿ ಲಾಕ್ಡೌನ್ನಲ್ಲಿ ಸಿಲುಕಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ತಾಯ್ನಾಡಿಗೆ ವಾಪಸ್ ಕರೆತರಲಾಗುತ್ತಿದೆ. ಈಗಾಗಲೇ ವಿಮಾನಗಳ ಮೂಲಕ ಒಂದಷ್ಟು ಜನರನ್ನು ವಾಪಸ್ ಕರೆತರಲಾಗಿದೆ. ಇದೀಗ ಭಾರತೀಯ ನೌಕಾ ದಳ ಆಪರೇಷನ್ ಸಮುದ್ರ ಸೇತು ಹೆಸರಿನಲ್ಲಿ ನೌಕಾದಳದ ಹಡಗಿನಲ್ಲಿ ಮೊದಲ ಬ್ಯಾಚ್ನ್ನು ಮಾಲ್ಡೀವ್ಸ್ನಿಂದ ಭಾರತಕ್ಕೆ ಕರೆತಂದಿದೆ.
ಅದರಂತೆ ಭಾನುವಾರ ಬೆಳಗ್ಗೆ 698 ಮಂದಿಯನ್ನ ಹೊತ್ತ ನೌಕಾ ಪಡೆಯ ಐಎನ್ಎಸ್ ಜಲಾಶ್ವ ಹಡಗು ಕೇರಳದ ಕೊಚ್ಚಿ ಬಂದರ್ಗೆ ಬಂದು ತಲುಪಿದೆ. ಮಾಲ್ಡೀವ್ಸ್ನ ಮಾಲೆ ಬಂದರಿನಿಂದ ಹೊರಟಿದ್ದ ಹಡಗಿನಲ್ಲಿ 19 ಮಂದಿ ಗರ್ಭಿಣಿಯರೂ ಸೇರಿದಂತೆ 698 ಮಂದಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಮಾಲ್ಡೀವ್ಸ್ನಿಂದ ಹೊರಡುವ ಮೊದಲೇ ಅಲ್ಲಿ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಇದೀಗ ಕೊಚ್ಚಿ ಬಂದರಿನಲ್ಲೂ ಅವರ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.