ಅಪ್ಪೇಹುಳಿ ಹೆಸರು ಕೇಳುತ್ತಿದ್ದರೇನೆ ಬಾಯಲ್ಲಿ ನೀರು ಬರುತ್ತದೆ. ಮಾವಿನ ಕಾಯಿ ಸೀಸನ್ನಲ್ಲಿ ಉತ್ತರಕನ್ನಡ ಭಾಗದಲ್ಲಿ ದಿನ ನಿತ್ಯ ಅಪ್ಪೇಹುಳಿ ಇರಲೇ ಬೇಕು. ಅದರಲ್ಲೂ ಬ್ರಾಹ್ಮಣರ ಎವರ್ಗ್ರೀನ್ ಫೇವರೆಟ್ ರೆಸಿಪಿ. ಇದನ್ನು ಮಾಡುವುದು ತುಂಬಾ ಸಿಂಪಲ್.
ಬೇಕಾಗುವ ಪದಾರ್ಥ:
ಮಾವಿನಕಾಯಿ
ಕರಿಬೇವು
ಹಸಿಮೆಣಸು
ಒಣಮೆಣಸು
ಬೆಳ್ಳುಳ್ಳಿ
ಉಪ್ಪು
ಸಕ್ಕರೆ
ಸಾಸಿವೆ
ಇಂಗು
ಉದ್ದಿನಬೇಳೆ
ಎಣ್ಣೆ
ಮಾಡುವ ವಿಧಾನ:
ಮೊದಲು ಮಾವಿನ ಕಾಯಿಯನ್ನು ಹೆಚ್ಚಿಕೊಂಡು ಅದಕ್ಕೆ ಕರಿಬೇವಿನ ೫ ಎಸಳು ಮತ್ತು ಚಿಕ್ಕ ಹಸಿಮೆಣಸಿನ ತುಂಡನ್ನು ಹಾಕಿ ಬೀಸಿಕೊಳ್ಳಬೇಕು. ನಂತರ ಹುಳಿಗೆ ತಕ್ಕಷ್ಟು ನೀರು ಉಪ್ಪು ಸ್ವಲ್ಪ ಸಕ್ಕರೆ ಸೇರಿಸಿಕೊಳ್ಳಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ , ಸಾಸಿವೆ, ಎಣ್ಣೆ, ಕರಿಬೇವು, ಒಣಮೆಣಸು, ಹಸಿಮೆಣಸು, ಉದ್ದಿನ ಬೇಳೆ, ಇಂಗು ಸೇರಿಸಿ ಒಗ್ಗರಣೆ ಕೊಟ್ಟರೆ ಅಪ್ಪೇಹುಳಿ ರೆಡಿ. ಇದನ್ನು ಮೆತ್ತ ಅನ್ನದ ಜೊತೆ ಸೇವಿಸಿದೆ ಮತ್ತಷ್ಟು ರುಚಿ.