Wednesday, August 17, 2022

Latest Posts

ಮಾಸಿಕ 12 ಸಾವಿರ ರೂ.ನಿಗದಿ ಪಡಿಸಲು ಒತ್ತಾಯಿಸಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

ಶಿವಮೊಗ್ಗ: ಮಾಸಿಕ 12 ಸಾವಿರ ರೂ ನಿಗದಿ ಮಾಡಬೇಕು ಹಾಗೂ ಬಾಕಿ ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಶಾ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕೆ ವೇತನ ಸಿಗುತ್ತಿಲ್ಲ. ಗೌರವಧನ ಹಾಗೂ ಮಾಸಿಕ ವೇತನ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಕೆಲಸ ಗಮನಿಸಿ ನೀಡುವ 6 ಸಾವಿರ ರೂ. ಕೂಡ ಸಿಗುತ್ತಿಲ್ಲ. ಅನುದಾನ ಇದ್ದರೂ ಕೊಡುತ್ತಿಲ್ಲ ಎಂದು ದೂರಿದರು.
ಕೂಡಲೇ 3 ಸಾವಿರ ರೂ. ಕೋವಿಡ್ ವಿಶೇಷ ಪ್ರೋತ್ಸಾಹ ಧನ ನೀಡಬೇಕು. ಫೇಸ್ ಶೀಲ್ಡ್ ಒದಗಿಸಬೇಕು. ಸ್ಯಾನಿಟೈಸರ್ ಇತ್ಯಾದಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಪ್ರೇಮಾ, ಚಂದ್ರಕಲಾ, ಸ್ವಾತಿ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!