Wednesday, August 17, 2022

Latest Posts

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ಕಾನೂನು ಉಲ್ಲಂಘಿಸಿದ ಕಾನೂನು ಸಚಿವ!

ಕೋಲ್ಕತ್ತಾ: ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಈ ಸಮಯದಲ್ಲಿ ಮಾಸ್ಕ್, ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸಾನಿಟೈಸ್ ಮಾಡುವುದು ಕಡ್ಡಾಯವಾಗಿದ್ದು,ಅನಸನ್ಸೋಲ್‌ನ ರೈಲಪಾರ್ ಪ್ರದೇಶದಲ್ಲಿ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮವೊಂದನ್ನು ಮಾಡಲಾಗಿದೆ.
ರಾಜ್ಯದ ಕಾನೂನು ಸಚಿವ ಮೊಲೊಯ್ ಘಟಕ್ ಅವರೇ ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಿದ್ದು, ನೂರಾರು ವಿದ್ಯಾರ್ಥಿಗಳು,ಪೋಷಕರು ಪಾಲ್ಗೊಂಡಿದ್ದರು. ಇಲ್ಲಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ನಡೆದಿದೆ. ಜನರಿಗೆ ಅಂತರ ಕಾಯ್ದುಕೊಳ್ಳಲು ಹೇಳುವ ನಾಯಕರೇ ಈ ರೀತಿ ನಡೆದುಕೊಂಡರೆ ಇವರು ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ ತಿಳಿಯದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!