ಕೊರೋನಾ ಸೋಂಕಿನ ವ್ಯಾಪಕತೆ ತಡೆಯಲು ಪ್ರಮುಖ ಅಸ್ತ್ರವಾಗಿರುವ ಮಾಸ್ಕ್ ನಿಂದ ನಮ್ಮ ಮುಖದಲ್ಲಿ ಸಾಕಷ್ಟು ಕಲೆ ಹಾಗೂ ತುರಿಕೆ ಬರುತ್ತದೆ. ಕಲೆಯನ್ನು ದೂರ ಮಾಡಲು ನಾವು ಕೆಲವೊಮ್ಮೆ ಮಾಸ್ಕ್ ಧರಿಸುವುದನ್ನೇ ಬಿಟ್ಟುಬಿಡುತ್ತೇವೆ. ಆದರೆ ಮಾಸ್ಕ್ ಧರಿಸಿಯೂ ನಮ್ಮ ಮುಖದ ಮೇಲೆ ಮೂಡುವ ಕಲೆಯನ್ನು ಹೋಗಿಸುವು ಹೇಗೆ ಎಂದು ನೋಡೊಣ:
ಈ ಟಿಪ್ಸ್ ಫಾಲೋ ಮಾಡುವುದರಿಂದ ನಮ್ಮ ಮುಖದ ಮೇಲೆ ಮೂಡುವ ಕಲೆಗಳಿಂದ ಮುಕ್ತರಾಗಬಹುದು..
ಪ್ರತಿ ಭಾರಿ ಧರಿಸುವ ಮಾಸ್ಕ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಬಳಿಕೆ ಮಾಡಿದ ನಂತರ ಮಾಸ್ಕ್ ಅನ್ನು ಪ್ರತಿ ಭಾರಿ ತೊಳೆಯಿರಿ.
ಹೊರಗೆ ಹೋಗಿ ಮನೆಗೆ ಬಂದ ಮೇಲೆ ನಿಮ್ಮ ಮಾಸ್ಕ್ ಅನ್ನು ಸ್ವಚ್ಚವಾಗಿ ತೊಳೆಯಿರಿ. ಹಾಗೂ ಒಗೆದ ಮಾಸ್ಕ್ ಸಂಪೂರ್ಣ ಒಣಗಿದ ಮೇಲೆ ಬಳಸಿ.
ಮೇಕ್ ಅಪ್ ಮಾಡದಿರಿ: ಮೇಕ್ ಅಪ್ ಮಾಡಿ ಮಾಸ್ಕ್ ಹಾಕುವುದರಿಂದ ಬೆವತು ಮುಖದಲ್ಲಿ ಅಲರ್ಜಿಯಾಗಲಿದೆ.
ಪ್ರತಿ ಭಾರಿ ಮಾಸ್ಕ್ ಬಳಿಸಿದ ನಂತರ ಮುಖವನ್ನು ಬೆಚ್ಚಗಿನ ನೀರು ಹಾಗೂ ಸಾಬೂನು/ ಫೇಸ್ ವಾಶ್ ನಿಂದ ತೊಳೆಯಿರಿ.
ನಿಮ್ಮ ಮೊಡವೆಯನ್ನು ಒಡೆಯಬೇಡಿ, ಇದರಿಂದ ಆ ಸ್ಥಳಕ್ಕೆ ಸೆಪ್ಟಿಕ್ ಆಗುವ ಸಾಧ್ಯತೆಗಳಿವೆ.