Thursday, July 7, 2022

Latest Posts

ಮಾಸ್ಕ್ ಹಾಕಿಲ್ವಾ? ಬನ್ನಿ ಬನ್ನಿ ಬನ್ನಿ ರಸ್ತೆಯಲ್ಲೇ ಪುಶಪ್ ಮಾಡಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇಂಡೋನೇಷಿಯಾದ ಬಾಲಿಯ ರೆಸಾರ್ಟ್ ಒಂದರಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದ ವಿದೇಶಿಗರಿಗೆ ಸ್ಥಳೀಯ
ಪೊಲೀಸರು ‘ಬುದ್ದಿ’ ಕಲಿಸಿದ ರೀತಿಯಿದು.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಶೇರ್ ಆಗುತ್ತಿದ್ದು, ಸಖತ್ ವೈರಲ್ ಆಗಿದೆ.
ಇಂಡೋನೇಷಿಯಾದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಳೆದ ವರ್ಷದಿಂದಲೇ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಹೀಗಿದ್ದೂ ಇಲ್ಲಿನ ಬಾಲಿಗೆ ಪ್ರವಾಸಕ್ಕೆ ಬರುವ ವಿದೇಶಿಗರು ಮಾಸ್ಕ್ ಇಲ್ಲದೇ ಓಡಾಡುತ್ತಿರೋದು ಪೊಲೀಸರ ಗಮನಕ್ಕೆ ಬಂದಿದೆ. ಈ ಪೈಕಿ 70ಕ್ಕೂ ಹೆಚ್ಚು ಮಂದಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗಿದೆ. ಇನ್ನು ಕೆಲವು ಮಂದಿ ತಮ್ಮ ಬಳಿ ಹಣ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾದ್ರೆ ಬನ್ನಿ ರಸ್ತೆಯಲ್ಲಿ ಪುಶಪ್ ಮಾಡಿ ಎಂದು ಶಿಕ್ಷೆ ನೀಡಿದ್ದಾರೆ ಪೊಲೀಸರು.  ಇಲ್ಲೀಗ ಮಾಸ್ಕ್ ಧರಿಸದವರಿಗೆ 50 ಪುಶಪ್, ಸರಿಯಾಗಿ ಮಾಸ್ಕ್ ಹಾಕದವರಿಗೆ 15 ಪುಶಪ್‌ಗಳನ್ನ ಮಾಡಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss