ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಉತ್ತರಾಖಂಡ್ ನ ಕೋಟೇಶ್ವರ್ ಸನಾತನ ಧರ್ಮ್ ಸೇವಾ ಸಂಘ, ಪಾರಮಾರ್ಥಿಕ ಟ್ರಸ್ಟ್, ಗೋಧೂಳಿ ಮೀಡಿಯಾ ಅಂಡ್ ಬ್ರಾಡ್ಕಾಸ್ಟ್ (ಪ್ರೈ)ಲಿ.ಸಂಸ್ಥೆಯ ವತಿಯಿಂದ ಗೋತೀರ್ಥ ಆಶ್ರಮದಲ್ಲಿ ‘ಮಾ-ಸಮೃದ್ಧ್ ಕೀ ದೇವಿ ಗೋಮಾತಾ’ಎಂಬ ವಿಶಿಷ್ಟ ಸಾಕ್ಷ್ಯ ಚಿತ್ರವೊಂದನ್ನು ಬಾಬಾ ರಾಮ್ದೇವ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರ ಸಮ್ಮುಖ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭ ಬಾಬಾ ರಾಮ್ ದೇವ್ , ಆಚಾರ್ಯ ಬಾಲಕೃಷ್ಣಜೀ, ಗುಜರಾತ್ ಸ್ವಾಮಿ ನಾರಾಯಣ ಆಶ್ರಮದ ಮಹಂತ್ ಆಚಾರ್ಯ ರಾಮಸ್ವಾಮಿ, ಡಾ.ಓಂ ಪ್ರಕಾಶ್ ಸೋನಿ, ಡಾ.ಶಿವರಾಣಿ ಸೋನಿ, ಆಚಾರ್ಯ ಸುನಿಲ್ ಭಗತ್ , ಶ್ರೀರಾಮಚಂದ್ರ ಭಾರತಿ ಸ್ವಾಮೀಜಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಗೋಮಾತೆ ಭಾರತೀಯರ ಜೀವನದಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸಾರಿ ಹೇಳುವ ಈ ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಶಿ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಸಂಘದ ಸಹಸರಕಾರ್ಯವಾಹರಾದ ಸುರೇಶ್ ಸೋನಿ, ದತ್ತಾತ್ರೇಯ ಹೊಸಬಾಳೆ, ವಿಶ್ವಹಿಂದು ಪರಿಷತ್ತಿನ ದಿನೇಶ್ಜೀ ಮುಂತಾದವರು ಚಿತ್ರಕ್ಕೆ ಶುಭಕೋರಿ ಸಂದೇಶ ನೀಡಿದರು.
ಗೋತೀರ್ಥ ಆಶ್ರಮದ ಟ್ರಸ್ಟ್ನ ಸ್ಥಾಪಕಾಧ್ಯಕ್ಷರಾದ ಶ್ರೀ ರಾಮಚಂದ್ರ ಭಾರತಿ ಸ್ವಾಮೀಜಿಯವರ ವಿಶೇಷ ಮುತುವರ್ಜಿಯಲ್ಲಿ ರೂಪುಗೊಂಡ ಈ ಸಾಕ್ಷ್ಯಚಿತ್ರದ ಲೋಕಾರ್ಪ ಣೆ ಕಾರ್ಯಕ್ರಮದೊಂದಿಗೆ ಈ ಸಾಕ್ಷ್ಯಚಿತ್ರವನ್ನು ಕೂಡಾ ಆಸ್ಥಾ ಟಿವಿ ಸೇರಿದಂತೆ ಅನೇಕ ಧಾರ್ಮಿಕ ಟಿವಿ ಚಾನೆಲ್ಗಳು ನೇರ ಪ್ರಸಾರ ಮಾಡಿದವು.